ಉಡುಪಿ: ಇಲ್ಲಿನ ಪೆರಂಪಳ್ಳಿಯ ತಾಂಗೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಾಣವಾಗಲಿರುವ ನೂತನ ಮುಖಮಂಟಪಕ್ಕೆ ಈಚೆಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಪಾಡಿಗಾರು ಶ್ರೀನಿವಾಸ ತಂತ್ರಿ ವಿಧಿಪೂರ್ವಕ ಶಿಲಾನ್ಯಾಸ ನೆರವೇರಿಸಿದರು. ಅರ್ಚಕ ರಾಘವೇಂದ್ರ ಭಟ್ ಮತ್ತು ಮುರಳಿ ಭಟ್ ಇದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಶಾಸಕ ರಘುಪತಿ ಭಟ್ ಶಿಫಾರಸಿನಂತೆ ಮಂಜೂರಾದ 10 ಲಕ್ಷ ರೂ. ಮತ್ತು ಭಕ್ತರ ನೆರವಿನಿಂದ ಮುಖಮಂಟಪ ರಚನೆಯಾಗುತ್ತಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ