ಉಡುಪಿ: ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಆಗುವ ತೊಂದರೆ, ಸಮಸ್ಯೆ ಜೊತೆಗೆ ಬೀದಿನಾಯಿ ಸಹಿತ ಅನೇಕ ಮೂಕಪ್ರಾಣಿಗಳಿಗೂ ತೊಂದರೆಯಾಗಲಿದೆ.
ಬೆಳಿಗ್ಗೆ 6ರಿಂದ 10ರ ಅವಧಿಯಲ್ಲಿ ಮೂಕಪ್ರಾಣಿಗಳಿಗೂ ಆಹಾರ, ನೀರು ನೀಡುವ ಮೂಲಕ ಅವುಗಳ ಹಸಿವು, ಬಾಯಾರಿಕೆ ನೀಗಿಸುವ ಕೆಲಸ ಮಾಡಬೇಕು ಎಂದು ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಸಂಸ್ಥಾಪಕಿ ಬಬಿತಾ ರಾಜ್ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕಳೆದ ಕೆಲವು ವರ್ಷದಿಂದ ಟ್ರಸ್ಟ್ ಮೂಲಕ ಬೀದಿನಾಯಿಗಳ ಆರೈಕೆಯಲ್ಲಿ ತೊಡಗಿರುವ ಬಬಿತಾ, ಮೂಕಪ್ರಾಣಿಗಳ ಮೇಲೂ ಪ್ರೀತಿ, ಅನುಕಂಪ ತೋರಿಸಿ. ನಿಮ್ಮ ಮನೆ ಮುಂದೆ, ಬೀದಿನಾಯಿಗಳು ಇರುವ ಜಾಗದಲ್ಲಿ ಆಹಾರ ಮತ್ತು ನೀರು ಇಡುವ ಮೂಲಕ ಅವುಗಳ ಹೊಟ್ಟೆಯನ್ನೂ ತಣಿಸಿರಿ. ಅದಕ್ಕಿಂತ ಮಿಗಿಲಾದ ಸೇವೆ ಬೇರೆ ಇಲ್ಲ ಎಂದು ಮನವಿ ಮಾಡಿದ್ದಾರೆ