Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮೊಟ್ಟೆಯಲ್ಲೂ ಭ್ರಷ್ಟಾಚಾರ: ಮಹಿಳಾ ಸಂಕುಲಕ್ಕೇ ಕಳಂಕ

ಮೊಟ್ಟೆಯಲ್ಲೂ ಭ್ರಷ್ಟಾಚಾರ: ಮಹಿಳಾ ಸಂಕುಲಕ್ಕೇ ಕಳಂಕ

ಉಡುಪಿ: ಗರ್ಭಿಣಿಯರು, ಬಾಣಂತಿಯರು ಹಾಗೂ ಅಪೌಷ್ಟಿಕತೆ ಹೊಂದಿರುವ ಮಕ್ಕಳಿಗೆ ಸರಕಾರ ಮಾತೃಪೂರ್ಣ ಯೋಜನೆಯಡಿ ನೀಡುತ್ತಿರುವ ಮೊಟ್ಟೆಯಲ್ಲೂ ಭ್ರಷ್ಟಾಚಾರ ಮಾಡಿರುವ ಸಚಿವೆ ಶಶಿಕಲಾ ಜೊಲ್ಲೆ ಇಡೀ ಮಹಿಳಾ ಸಂಕುಲಕ್ಕೇ ಕಳಂಕವಾಗಿ ಪರಿಣಮಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಹೇಳಿದೆ.

ಮಹಿಳೆಯಾಗಿ, ತಾಯಿಯಾಗಿ ಮಹಿಳೆಯರ ಕಲ್ಯಾಣಕ್ಕಾಗಿ ಟೊಂಕ ಕಟ್ಟಿ ನಿಲ್ಲಬೇಕಾಗಿದ್ದ ಇಲಾಖಾ ಸಚಿವರ ವಕ್ರದೃಷ್ಟಿ ಗರ್ಭಿಣಿಯರಿಗೆ ನೀಡುವ ಮೊಟ್ಟೆಯ ಮೇಲೂ ಬಿದ್ದಿರುವುದು ನಾಚಿಕೆಗೇಡಿನ ವಿಚಾರ.

ಭ್ರಷ್ಟಾಚಾರಕ್ಕೂ ಒಂದು ಮಿತಿ ಇರಬೇಕು. ತಾವೊಬ್ಬ ಮಹಿಳೆ ಎನ್ನುವುದನ್ನೂ ಮರೆತು ಮೊಟ್ಟೆಗಳನ್ನು ನುಂಗುವ ಬೃಹತ್ ಗಾತ್ರದ ತಿಮಿಂಗಿಲವಾಗಿ ಹೊರಬಿದ್ದಿರುವುದು ಬಿಜೆಪಿಯ ಭ್ರಷ್ಟಾಚಾರ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಹೇಳಿದ್ದಾರೆ.

ಪ್ರತೀ ತಿಂಗಳೂ ತಮಗೆ ಐವತ್ತು ಲಕ್ಷ ರೂ. ಕಮಿಷನ್ ಕೊಡಿಸುವಂತೆ ಸಚಿವೆ ಜೊಲ್ಲೆ ಸೂಚಿಸಿರಬೇಕಾದರೆ ಅವರು ತಮ್ಮ ಇಡೀ ಆಡಳಿತಾವಧಿಯಲ್ಲಿ ಎಷ್ಟು ಕೋಟಿಗಳನ್ನು ಕೊಳ್ಳೆ ಹೊಡೆಯುವ ಸಂಚು ರೂಪಿಸಿರಬಹುದು? ಕೊರೋನಾ ಪರಿಸ್ಥಿತಿಯಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ತರಿಸುತ್ತಿರುವ ಜನರಿರುವಾಗ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರದ ಸಚಿವರು, ಶಾಸಕರು ಕೋಟಿ ಕೋಟಿಗಳಲ್ಲಿ ಲೂಟಿ ಮಾಡುವ ಕಾಯಕದಲ್ಲಿ ತೊಡಗಿರುವುದು ಅಸಹ್ಯ ಹುಟ್ಟಿಸುತ್ತಿದೆ ಎಂದು ವಾಗ್ಳೆ ಕಿಡಿಕಾರಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!