Thursday, July 7, 2022
Home ಸಮಾಚಾರ `ಮೋದಿ ನೇತೃತ್ವದಲ್ಲಿ ದೇಶ ಸುಭದ್ರ'

`ಮೋದಿ ನೇತೃತ್ವದಲ್ಲಿ ದೇಶ ಸುಭದ್ರ’

`ಮೋದಿ ನೇತೃತ್ವದಲ್ಲಿ ದೇಶ ಸುಭದ್ರ’

(ಸುದ್ದಿಕಿರಣ ವರದಿ)
ಉಡುಪಿ: ಪ್ರಸ್ತುತ ಅಫ್ಘಾನಿಸ್ಥಾನದ ಸ್ಥಿತಿ ನೋಡಿದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ದೇಶ ಎಷ್ಟು ಸುಭದ್ರವಾಗಿದೆ ಎಂಬುದು ಗೊತ್ತಾಗುತ್ತದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 10 ವರ್ಷದಿಂದ ಜನರು ನಮಗೆ ನಿರಂತರ ಆಶೀರ್ವಾದ ಮಾಡಿದ್ದಾರೆ. ಭಾರತಕ್ಕೆ ನರೇಂದ್ರ ಮೋದಿ ನೇತೃತ್ವದ ಬದಲು ಈ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ನೇತೃತ್ವ ಇದ್ದಿದ್ದರೆ ದೇಶದ ಸ್ಥಿತಿ ಭಯಾನಕವಾಗಿರುತ್ತಿತ್ತು ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.ಎಂದು ಸಚಿವ ಸುನಿಲ್ ಹೇಳಿದರು.

ಜನಾಶೀರ್ವಾದ ಯಾತ್ರೆ ಕುರಿತು ತಾಲಿಬಾನ್ ಸಂಸ್ಕೃತಿ ಮತ್ತು ಬಿಜೆಪಿ ಸಂಸ್ಕೃತಿಗೆ ವ್ಯತ್ಯಾಸವಿಲ್ಲ ಎಂಬ ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್, ಜನರ ಆಶೀರ್ವಾದ ಕಳೆದುಕೊಂಡವರು ಈ ರೀತಿ ಮಾತನಾಡುತ್ತಾರೆ. ಜನರ ಭಾವನೆಗಳಿಂದ ದೂರ ಆದವರು ಈ ರೀತಿ ಟೀಕಿಸುತ್ತಾರೆ ಎಂದು ಮಾತಿನ ಚಾಟಿ ಬೀಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!