ಉಡುಪಿ: ಇಲ್ಲಿನ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗ ಕಚೇರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ ಬುಧವಾರ ಭೇಟಿ ನೀಡಿದರು.
ಸಂಸ್ಥೆಯ ಬಹುಮುಖಿ ಚಟುವಟಿಕೆ ಕಂಡು ಸಂತಸ ವ್ಯಕ್ತಪಡಿಸಿದರು. ಇಲಾಖೆಯಿಂದ ಸಾಧ್ಯವಾಗುವ ನೆರವನ್ನು ಸಂಸ್ಥೆಗೆ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಉಡುಪಿ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ದಕ್ಷಿಣ ಕನ್ನಡ ಜಿಲ್ಲಾ ಸಹಾಯಕ ನಿರ್ದೇಶಕ ರಾಜೇಶ್ ಹಾಗೂ ಸಂಸ್ಥೆ ಕೋಶಾಧಿಕಾರಿ ಕೆ. ಮನೋಹರ್ ಇದ್ದರು.
ಸಂಸ್ಥೆ ಕಾರ್ಯದರ್ಶಿ ಮುರಳಿ ಕಡೆಕಾರ್ ಅವರು ರಂಗಪ್ಪ ಅವರನ್ನು ಗೌರವಿಸಿದರು.