Tuesday, May 17, 2022
Home ಸಮಾಚಾರ ರಾಜ್ಯ ವಾರ್ತೆ ಯತ್ನಾಳ್ ಹೇಳಿಕೆ: ಪಕ್ಷ ಗಂಭೀರ ಪರಿಗಣನೆ- ಕಟೀಲ್

ಯತ್ನಾಳ್ ಹೇಳಿಕೆ: ಪಕ್ಷ ಗಂಭೀರ ಪರಿಗಣನೆ- ಕಟೀಲ್

ಸುದ್ದಿಕಿರಣ ವರದಿ
ಮಂಗಳವಾರ, ಮೇ 10

ಯತ್ನಾಳ್ ಹೇಳಿಕೆ: ಪಕ್ಷ ಗಂಭೀರ ಪರಿಗಣನೆ- ಕಟೀಲ್
ಉಡುಪಿ: ‘ಮುಖ್ಯಮಂತ್ರಿಯನ್ನಾಗಿ ಮಾಡಲು 2,500 ಕೋಟಿ ಕೇಳಿದ್ದರು’ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮಕ್ಕಾಗಿ ಕೇಂದ್ರ ಶಿಸ್ತು ಸಮಿತಿಗೆ ಕಳಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳವಾರ ಇಲ್ಲಿನ ಕಿದಿಯೂರು ಹೋಟೆಲ್‌ನಲ್ಲಿ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಬಿ’ ಫಾರಂ ಪಡೆದು ಶಾಸಕರಾದವರು ಪಕ್ಷಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿದಲ್ಲಿ ಕೇಂದ್ರ ಶಿಸ್ತು ಸಮಿತಿ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ಹೋರಾಟಗಾರರ ವಿಚಾರಧಾರೆಗಳು ಬೇರೆ ಹಾಗೂ ಸಾಂವಿಧಾನಿಕವಾಗಿ ಆಡಳಿತ ನಡೆಸುವ ಸರ್ಕಾರದ ಜವಾಬ್ದಾರಿಗಳೇ ಬೇರೆ.

ಪ್ರಮೋದ್ ಮುತಾಲಿಕ್ ಹಾಗೂ ಪಕ್ಷದ ವಿಚಾರ ಧಾರೆಗಳು ಒಂದೇ. ಸಂಘಟನೆಯಾಗಿ ಹಲವು ವಿಚಾರಗಳನ್ನು ಸರ್ಕಾರಕ್ಕೆ ಹೇಳಿದಾಗ ಎಲ್ಲವನ್ನೂ ಮಾಡಲು ಸಾಧ್ಯವಾಗುವುದಿಲ್ಲ.

ಪ್ರಮೋದ್ ಮುತಾಲಿಕ್ ಸಹಜವಾದ ಅಪೇಕ್ಷೆಗಳನ್ನು ವ್ಯಕ್ತಪಡಿಸಿದ್ದು, ಸಂವಿಧಾನದಡಿ ಪರಿಶೀಲಿಸಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಬಿಜೆಪಿಗೆ ಸೇರ್ಪಡೆಗೊಳ್ಳಲು ಹಲವರು ಸಿದ್ಧರಿದ್ದು ಮಾತುಕತೆ ನಡೆಯುತ್ತಿದೆ. ತಾಂತ್ರಿಕ ಕಾರಣ, ಸಮಸ್ಯೆ ಹಾಗೂ ಕಾರ್ಯಕರ್ತರ ಅಪೇಕ್ಷೆಯ ಹಿನ್ನೆಲೆಯಲ್ಲಿ ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂದು ನಿರ್ಧರಿಸಲಾಗುವುದು ಎಂದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!