ಉದ್ಯಾವರ: ಇಲ್ಲಿನ ಪ್ರತಿಷ್ಠಿತ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ 41 ವರ್ಷ, ಅದರಲ್ಲೂ ಮುಖ್ಯೋಪಾಧ್ಯಾಯರಾಗಿ 25 ವರ್ಷ ಸೇವೆ ಸಲ್ಲಿಸಿ, ಶಾಲಾಭಿವೃದ್ಧಿಗೆ ಶ್ರಮಿಸಿದ 2009ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಇದೀಗ ಸೇವಾ ನಿವೃತ್ತರಾದ ಗಣಪತಿ ಕಾರಂತ ಅವರನ್ನು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ (ಯು.ಎಫ್.ಸಿ.) ವತಯಿಂದ ಈಚೆಗೆ ಸನ್ಮಾನಿಸಲಾಯಿತು.
ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಇಂಗ್ಲೀಷ್ ವಿಭಾಗ ಮುಖ್ಯಸ್ಥ ಡಾ| ಪ್ರಸಾದ ರಾವ್ ಎಂ. ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷಕುಮಾರ್ ಕುಗ್ವೆ ನೆರವೇರಿಸಿದರು.
ಸಂಸ್ಥೆ ಅಧ್ಯಕ್ಷ ಶೇಖರ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಪಳ್ಳಿ, ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್, ಯು. ಪದ್ಮನಾಭ ಕಾಮತ್ ಮತ್ತು ಶರತ್ ಕುಮಾರ್, ಮಾಜಿ ಅಧ್ಯಕ್ಷ ರಫೀಕ್ ಯೂಸುಫ್, ಅಬಿದ್ ಆಲಿ, ಅನೂಪ್ ಕುಮಾರ್ ಮತ್ತು ಹಿರಿಯ ಸದಸ್ಯ ಹಮೀದ್ ಸಾಬ್ಜಾನ್ ಇದ್ದರು
ಯು.ಎಫ್.ಸಿ.ಯಿಂದ ಸಂಮಾನ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...