Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ರಸ್ತೆಗೆ ತುಳು ಮಹಾಭಾರತೊ ಕವಿ ಅರುಣಾಬ್ಜನ ಹೆಸರು

ರಸ್ತೆಗೆ ತುಳು ಮಹಾಭಾರತೊ ಕವಿ ಅರುಣಾಬ್ಜನ ಹೆಸರು

ಉಡುಪಿ: ಜೈ ತುಳುನಾಡ್ ಸಂಘ ವತಿಯಿಂದ ಕೊಡವೂರಿನಲ್ಲಿ ನಡೆಯುತ್ತಿರುವ ತುಳು ಲಿಪಿ ಕಾರ್ಯಾಗಾರದಲ್ಲಿ ಊರಿನ ಹೆಸರಿನ ನಾಮಫಲಕ ಅಭಿಯಾನ ಅಂಗವಾಗಿ ಪ್ರಾಚೀನ ತುಳು ಕವಿ ಅರುಣಾಬ್ಜನ ಜನ್ಮಸ್ಥಳವಾದ ಕೊಡವೂರಿನ ರಸ್ತೆಯೊಂದಕ್ಕೆ ತುಳು ಲಿಪಿಯಲ್ಲಿ ಊರಿನ ನಾಮಫಲಕ ಅನಾವರಣ ಕಾರ್ಯಕ್ರಮ ಈಚೆಗೆ ಕೊಡವೂರು ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ ಸಹಯೋಗದೊಂದಿಗೆ ನಡೆಸಲಾಯಿತು.

ಕೊಡವೂರು ವೃತ್ತ ಬಳಿ ತುಳು ಲಿಪಿ ನಾಮಫಲಕವನ್ನು ಆಲೂಪ ರಾಜವಂಶಸ್ಥ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಆಕಾಶರಾಜ್ ಜೈನ್ ಅನಾವರಣಗೊಳಿಸಿ, ನಾವು ಅನ್ಯರೊಂದಿಗೆ ಅವರಿಗೆ ಗೊತ್ತಿರುವ ಭಾಷೆಯಲ್ಲಿ ಸಂವಹನ ನಡೆಸಿದಾಗ ಅದು ಮನಸ್ಸನ್ನು ಮುಟ್ಟಿದರೆ, ನೆಲದ ಮಣ್ಣಿನ ಅಂತಃಸತ್ವದೊಂದಿಗೆ ಭಾವನೆಗಳಿಂದ ಮಿಳಿತವಾದ ಮಾತೃಭಾಷೆಯಲ್ಲಿ ಸಂವಹನ ನಡೆಸಿದಾಗ ಅದು ಅವರ ಹೃದಯ ಮುಟ್ಟಬಲ್ಲದು. ಈ ನಿಟ್ಟಿನಲ್ಲಿ ತುಳುವರಾದ ನಾವೆಲ್ಲ ಸುಮಾರು 2,500 ವರ್ಷಗಳ ಇತಿಹಾಸವುಳ್ಳ ಮಾತೃ ಭಾಷೆ ತುಳು ಬಗ್ಗೆ ಅಭಿಮಾನ, ಗೌರವ ಇರಿಸಿಕೊಂಡು ತುಳು ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ ಉಳಿಸಿ ಬೆಳೆಸಲು ಕೈಜೋಡಿಸೋಣ ಎಂದರು.

ಅಭ್ಯಾಗತರಾಗಿದ್ದ ನಗರಸಭೆ ಕೊಡವೂರು ವಾರ್ಡ್ ಸದಸ್ಯ ವಿಜಯ ಕೊಡವೂರು, ತುಳು ಮಹಾಭಾರತೊ ಬರೆದ ಕೊಡವೂರಿನ ಅರುಣಾಬ್ಜನ ಹೆಸರನ್ನು ಇಲ್ಲಿನ ಒಂದು ಮಾರ್ಗಕ್ಕೆ ಇಡಲು ಕಾನೂನಾತ್ಮಕವಾಗಿ ಪ್ರಯತ್ನಿಸಲಾಗುವುದು ಎಂದರು.

ಸ್ಥಳೀಯ ಶ್ರೀ ಶಂಕರನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಕೊಡವೂರು ವ್ಯ.ಸೇ.ಸ. ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್, ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಾದ ರಾಜ ಎ. ಸೇರಿಗಾರ್, ಸುಧಾ ಎನ್. ಶೆಟ್ಟಿ, ಬೇಬಿ ಮೆಂಡನ್, ರಾಮ ಸೇರಿಗಾರ್, ಶ್ರೀನಿವಾಸ ಬಾಯರಿ, ಭಾಸ್ಕರ ಶೆಟ್ಟಿ, ಪ್ರಶಾಂತ ಜಿ. ಕೊಡವೂರು, ಜೀವನ್ ಕುಮಾರ್ ಪಾಳೆಕಟ್ಟೆ, ಪ್ರವೀಣ್ ಜಿ. ಕೊಡವೂರು, ಸರೋಜಿನಿ ವಿಜಯ್, ಯಶೋದಾ ಕೇಶವ್, ಕಿರಣ್ ತುಳುವೆ, ರಾಜೇಶ್ ತುಳುವೆ, ಜಗದೀಶ ಕಲ್ಕಳ ಇದ್ದರು.

ಜೈ ತುಳುನಾಡ್ ಸಂಘಟನೆಯ ಶರತ್ ಕೊಡವೂರು ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಪ್ರಸ್ತಾವನೆಗೈದರು. ಉಜ್ವಲ ಪೂಜಾರಿ ನಿರೂಪಿಸಿ, ವಂದಿಸಿದರು.

ತುಳು ಲಿಪಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!