ಬ್ರಹ್ಮಾವರ: ಇಲ್ಲಿನ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ವನಮಹೋತ್ಸವ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಕ್ಲಬ್ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಮುಖ್ಯ ಅತಿಥಿಯಾಗಿದ್ದ, ಅನಿವಾಸಿ ಭಾರತೀಯ ಉದ್ಯಮಿ ಕೆಂಜೂರು ಶಶಿಧರ ಶೆಟ್ಟಿ ಬಹರೈನ್ ಅವರು ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಎಲ್ಲರೂ ತಮ್ಮ ಮನೆಯ ಆವರಣಗಳಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಿ, ಪರಿಸರ ಬೆಳೆಸಲು ಸಹಕರಿಸಬೇಕು ಎಂದರು.
ಮುಂಬರುವ ದಿನಗಳಲ್ಲಿ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇನ್ನಷ್ಟು ಪರಿಸರ ಕಾಳಜಿಯ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಕ್ಲಬ್ ಅಧ್ಯಕ್ಷ ಎಂ. ಚಂದ್ರಶೇಖರ ಹೆಗ್ಡೆ ಹೇಳಿದರು.
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಗ್ರೆಗೊರಿ ಡಿ’ಸಿಲ್ವ, ಸದಸ್ಯರಾದ ಜೇಮ್ಸ್ ಒಲಿವೆರಾ, ಜೋಸೆಫ್ ಸುವಾರಿಸ್, ಸುದೇಶ್ ಹೆಗ್ಡೆ, ಪ್ರಮೋದ್ ಶೆಟ್ಟಿ, ಪ್ರಸನ್ನ ಶೆಟ್ಟಿ, ವಿವೇಕ್ ಕರ್ನೇಲಿಯೊ ಮೊದಲಾದವರಿದ್ದರು.
100ಕ್ಕೂ ಹೆಚ್ಚು ಗಿಡಗಳನ್ನು ಕ್ಲಬ್ ಆವರಣದಲ್ಲಿ ನೆಡಲಾಯಿತು