ವಿದಾಯ ಸಮಾರಂಭ
(ಸುದ್ದಿಕಿರಣ ವರದಿ)
ಉಡುಪಿ: ಲೋಕೋಪಯೋಗಿ ಇಲಾಖೆಯಲ್ಲಿ 37 ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಸಂಜೀವ ನಾಯ್ಕ್ ಜು. 31ರಂದು ಸೇವಾ ನಿವೃತ್ತಿ ಹೊಂದಿದ್ದು, ಅವರನ್ನು ಕಚೇರಿಯ ಅಧಿಕಾರಿ, ಸಿಬ್ಬಂದಿಗಳು ಮತ್ತು ಗುತ್ತಿಗೆದಾರರು ಸನ್ಮಾನಿಸಿ, ಬೀಳ್ಕೊಡುಗೆ ಸಮಾರಂಭ ಬನ್ನಂಜೆ ಲೋಕೋಪಯೋಗಿ ಇಲಾಖೆ ಉಪ ವಿಭಾಗ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಂಜೀವ ನಾಯ್ಕ್ ಪತ್ನಿ ಸವಿತ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಜಗದೀಶ ಭಟ್, ಸಹಾಯಕ ಇಂಜನಿಯರ್ ಗಿರೀಶ್, ಸೋಮನಾಥ, ರಾಜೇಶ್ ಹಾಗೂ ಇಲಾಖೆ ಸಿಬ್ಬಂದಿಗಳು, ಗುತ್ತಿಗೆದಾರರಾದ ಹಸನ್ ವಡ್ಡರ್ಸೆ, ರವೀಂದ್ರ ನಾಯಕ್, ಅಶೋಕ್ ಸುವರ್ಣ ಮೊದಲಾದವರಿದ್ದರು.