Tuesday, May 17, 2022
Home ಸಮಾಚಾರ ಜಿಲ್ಲಾ ಸುದ್ದಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಮಹಿಳಾ ದಿನಾಚರಣೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಮಹಿಳಾ ದಿನಾಚರಣೆ

ಸುದ್ದಿಕಿರಣ ವರದಿ
ಗುರುವಾರ, ಮಾರ್ಚ್ 24

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ವಿಪ್ರ ಮಹಿಳಾ ದಿನಾಚರಣೆ
ಉಡುಪಿ: ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಗುಂಡಿಬೈಲು ಬ್ರಾಹ್ಮೀ ಸಭಾಭವನದಲ್ಲಿ ವಿಪ್ರ ಮಹಿಳಾ ದಿನಾಚರಣೆ ಮಾಡಲಾಯಿತು.

ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮತ್ತು ಪಂಚಕರ್ಮ ಚಿಕಿತ್ಸಾ ತಜ್ಞೆ ಡಾ. ಸ್ವಾತಿ ಎನ್. ಭಟ್ `ಮಹಿಳೆಯರ ಆರೋಗ್ಯ ಸಮಸ್ಯೆ ಮತ್ತು ಪರಿಹಾರ’ ವಿಷಯದ ಬಗ್ಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಯಾಗಿದ್ದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಪ್ರಾಂಶುಪಾಲೆ ಡಾ| ನಿರ್ಮಲಾ ಹರಿಕೃಷ್ಣ, ಈಗಿನ ಪೀಳಿಗೆಯ ಮಕ್ಕಳು ಮತ್ತು ಯುವತಿಯರಿಗೆ ಧಾರ್ಮಿಕ ಪ್ರಜ್ಞೆ ಮತ್ತು ಸನಾತನ ಸಂಪ್ರದಾಯದ ಬಗ್ಗೆ ಅರಿವು ಮೂಡಿಸುವ ಮಾಹಿತಿ ಶಿಬಿರ, ಉಪನ್ಯಾಸಗಳನ್ನು ಯುವ ಬ್ರಾಹ್ಮಣ ಪರಿಷತ್ ನಂಥ ಸಂಘಟನೆಗಳು ಆಯೋಜಿಸುವ ಮೂಲಕ ಸದೃಢ ಸಮಾಜ ಕಟ್ಟುವಲ್ಲಿ ಶ್ರಮಿಸಬೇಕು ಎಂದರು.

ಇನ್ನೋರ್ವ ಮುಖ್ಯ ಅತಿಥಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಪರಿಷತ್ತಿನ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿ ಶುಭಾಶಂಸನೆಗೈದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ವಿಪ್ರ ಸಾಧಕಿಯರಾದ ವಿದುಷಿ ಉಷಾ ಚಡಗ (ದ್ವೈತ ವೇದಾಂತ ವಿದ್ವಾಂಸೆ), ಡಾ| ಗೀತಾ ಮಯ್ಯ (ಶಿಕ್ಷಣ ತಜ್ಞೆ ಮಣಿಪಾಲ), ಶಾಂತಾ ಗಣೇಶ್ ಕುಂಭಾಶಿ (ಸಮಾಜ ಸೇವೆ), ಡಾ. ಅದಿತಿ ರಾವ್ (ಯುವ ಪ್ರತಿಭೆ) ಅವರನ್ನು ಸನ್ಮಾನಿಸಲಾಯಿತು.

ಅರ್ಹ ಅಶಕ್ತರು ಮತ್ತು ವಿದ್ಯಾರ್ಜನೆಗೆ 30 ಸಾವಿರ ರೂ. ಸಹಾಯಧನ ಹಸ್ತಾಂತರಿಸಲಾಯಿತು.

ಪರಿಷತ್ ಸದಸ್ಯೆಯರಾದ ಆಶಾ ರಘುಪತಿ ರಾವ್, ಸವಿತಾ ಶಶಿಧರ್, ದಿವ್ಯಾ ವಿಷ್ಣುಪ್ರಸಾದ್, ವಿಜಯಾ ರವಿ ಪ್ರಕಾಶ್, ಸುರೇಖ ಭಟ್, ರೇಣುಕಾ ಮತ್ತು ಶಶಿಪ್ರಭಾ ವಿವೇಕಾನಂದ ಅತಿಥಿಗಳು ಮತ್ತು ಸನ್ಮಾನಿತರನ್ನು ಪರಿಚಯಿಸಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ಪರಿಷತ್ತಿನ ನೂತನ ಸದಸ್ಯೆಯರ ವಿವರ ನೀಡಿದರು.

ಉಪಾಧ್ಯಕ್ಷೆ ಪದ್ಮಲತಾ ವಿಷ್ಣು ಸ್ವಾಗತಿಸಿ, ಅಧ್ಯಕ್ಷ ಚೈತನ್ಯ ಎಂ. ಜಿ. ಪ್ರಸ್ತಾವನೆಗೈದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು, ಕಾರ್ಯದರ್ಶಿ ವಿವೇಕಾನಂದ ಎನ್. ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಮಹಿಳಾ ಸದಸ್ಯೆಯರಿಂದ ಮನೋರಂಜನಾ ಕಾರ್ಯಕ್ರಮ ಜರುಗಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!