Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ವಿವಾದ ಬಗೆಹರಿಯುವ ವಿಶ್ವಾಸ

ವಿವಾದ ಬಗೆಹರಿಯುವ ವಿಶ್ವಾಸ

ವಿವಾದ ಬಗೆಹರಿಯುವ ವಿಶ್ವಾಸ

ಉಡುಪಿ: ಇಲ್ಲಿನ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿದ ಕಾರಣ ತರಗತಿಗೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಜಿ.ಐ.ಓ) ನಿಯೋಗ ಪ್ರಾಂಶುಪಾಲರ ಬಳಿ ತೆರಳಿ ವಿಚಾರದ ಕುರಿತು ಚರ್ಚಿಸಿತು.

ಮುಸ್ಲಿಮ್ ವಿದ್ಯಾರ್ಥಿನಿಯರು ಇತ್ತೀಚೆಗೆ ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದು, ಇಂಥ ಸಂದರ್ಭದಲ್ಲಿ ಅವರನ್ನು ಈ ರೀತಿಯ ವಿವಾದಕ್ಕೀಡುಮಾಡಿ ಮತ್ತಷ್ಟು ಶಿಕ್ಷಣದಿಂದ ಹಿಂದೆ ಸರಿಯುವ ಕ್ರಮಗಳನ್ನು ನಡೆಸುವುದು ತಪ್ಪು.

ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ತನ್ನದೇ ಆದ ಆಚರಣೆಗಳನ್ನು ಪಾಲಿಸುವ ಸಂಪೂರ್ಣ ಹಕ್ಕಿದೆ. ಇಂಥ ಸಂದರ್ಭದಲ್ಲಿ ಕೇವಲ ಹಿಜಾಬ್ ಹಾಕಿದ ಕಾರಣಕ್ಕೆ ತರಗತಿಯ ಪ್ರವೇಶ ನಿರಾಕರಿಸುವುದು ಸಂವಿಧಾನ ಬಾಹಿರ ಎಂದು ಪ್ರಾಂಶುಪಾಲರಿಗೆ ಮನವರಿಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ ರುದ್ರೇಗೌಡ ಅವರು ಜಿ.ಐ.ಓ ನಿಯೋಗದೊಂದಿಗೆ ಮಾತನಾಡಿ ಆಡಳಿತ ಸಮಿತಿ, ಪೋಷಕರು ಹಾಗೂ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಾಂಶುಪಾಲರು ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕನ್ನು ಎತ್ತಿಹಿಡಿದು ತರಗತಿ ಪ್ರವೇಶ ನೀಡುವ ವಿಶ್ವಾಸವಿದೆ ಎಂದು ನಿಯೋಗ ತಿಳಿಸಿದೆ.

ಒಂದು ವೇಳೆ ಹಿಜಾಬ್ ನಿರಾಕರಣೆ ಆದೇಶವನ್ನು ಕಾನೂನು ಬಾಹಿರವಾಗಿ ಮುಂದುವರಿಸಿದಲ್ಲಿ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಜಿಐಓ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!