Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು ವತಿಯಿಂದ ವಿವಿಧ ಕಾರ್ಯಕ್ರಮ

ಎಸ್.ಡಿ.ಎಂ. ಆಯುರ್ವೇದ ಕಾಲೇಜು ವತಿಯಿಂದ ವಿವಿಧ ಕಾರ್ಯಕ್ರಮ

ಉಡುಪಿ: ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಸ್ವಸ್ಥವೃತ್ತ ವಿಭಾಗ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಹಯೋಗದೊಂದಿಗೆ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು

ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಲಯಬದ್ಧ ಯೋಗ ನೃತ್ಯ ಸ್ಪರ್ಧೆ ಆಯೋಜಿಸಲಾಯಿತು. ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಜೂ. 8ರಿಂದ 21ರ ವರೆಗೆ ಆನ್ ಲೈನ್ ಯೋಗ ತರಬೇತಿ ಶಿಬಿರವನ್ನು ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಆಯೋಜಿಸಲಾಗಿತ್ತು.

ಜೂ. 21ರಂದು ಆನ್ ಲೈನ್ ಮೂಲಕ ಅತಿಥಿ ಉಪನ್ಯಾಸ ಆಯೋಜಿಸಲಾಗಿತ್ತು. ಕೋಲಾರ ದೇವರಾಜ ಅರಸ್ ಮೆಡಿಕಲ್ ಕಾಲೇಜು ಯೋಗ ಆಯುರ್ವೇದ ವಿಭಾಗ ಮುಖ್ಯಸ್ಥ ಹಾಗೂ ಸಹಪ್ರಾಧ್ಯಾಪಕ ಡಾ. ನಿತಿನ್ ಪಾಟೀಲ್, ವಿದ್ಯಾಥರ್ಿಗಳಲ್ಲಿ ಪರೀಕ್ಷೆ ಭಯ ಮತ್ತು ಒತ್ತಡ, ಹಿರಿಯರಲ್ಲಿ ಕೆಲಸದ ಒತ್ತಡ ಸಾಮಾನ್ಯವಾಗಿದೆ. ಅವುಗಳ ನಿವಾರಣೆಗೆ ಹಲವಾರು ಉಪಾಯಗಳಿದ್ದು ಅವುಗಳಲ್ಲಿ ಮುಖ್ಯವಾದದ್ದು ಯೋಗ. ನಮ್ಮ ಆರೋಗ್ಯ ಕಾಪಾಡುವಲ್ಲಿ ಮನಸ್ಸಿನ ಪಾತ್ರ ಬಹಳ ಮುಖ್ಯ. ಮನಸ್ಸಿನ ಸಂರಕ್ಷಣೆ, ವಿವಿಧ ಒತ್ತಡ ಹಾಗೂ ರೋಗಗಳಿಗೆ ಆಯುರ್ವೇದ ಮತ್ತು ಯೋಗಶಾಸ್ತ್ರದ ಸಹಯೋಗ ಪ್ರಾಮುಖ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪ್ರಾಂಶುಪಾಲೆ ಡಾ. ಮಮತಾ ಕೆ.ವಿ., ಈಚಿನ ದಿನಗಳಲ್ಲಿ ಯೋಗ ಬಹಳ ಪ್ರಾಮುಖ್ಯ ಪಡೆಯುತ್ತಿದೆ. ಯೋಗದ ಅಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ, ನಿರಂತರ ಅಭ್ಯಾಸ ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಬಹುದು ಎಂದರು.

ಡಾ. ಸಮುದ್ರುಡು ಸ್ವಾಗತಿಸಿದರು. ಡಾ. ಅಪರ್ಣ ನಿರೂಪಿಸಿದರು. ಡಾ. ರಕ್ಷಿತ ವಂದಿಸಿದರು. ಡಾ. ವಿಜಯ್ ಬಿ. ನೆಗಳೂರು, ಡಾ. ವಿದ್ಯಾಲಕ್ಷ್ಮಿ ಕೆ., ಡಾ. ಯೋಗೀಶ ಆಚಾರ್ಯ, ಡಾ. ಸಂದೇಶ್ ಕುಮಾರ್ ಶೆಟ್ಟಿ, ಡಾ. ಶ್ರೀನಿಧಿ, ಡಾ. ಧನ್ಯ ಬಿ. ಎಸ್. ಡಾ ಸರಿತ, ಡಾ ಶರಶ್ಚಂದ್ರ, ಡಾ. ಕೃತಿ ಅಮೈ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!