Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ

ವಿಶೇಷ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ

ಮಣಿಪಾಲ: ಇಲ್ಲಿನ ಈಶ್ವರನಗರ ಮಹಾಮಾಯ ಭಜನಾ ಮಂಡಳಿ ಅಧ್ಯಕ್ಷೆ ಮಾಯಾ ಕಾಮತ್ ಅವರ ಹುಟ್ಟುಹಬ್ಬವನ್ನು ಆಸರೆ ಹೊಂಬೆಳಕು ವಿಶೇಷ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಾಯಾ ಕಾಮತ್ ಅವರನ್ನು ಅಭಿನಂದಿಸಲಾಯಿತು. ವಿಶೇಷ ಸಾಧನೆಗೈದ ಅರ್ಚನಾ ಮತ್ತು ನಂದಿನಿ ಶೆಣೈ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಸರೆ ಸೇವಾಶ್ರಮದ ಅಧ್ಯಕ್ಷ ಜೈವಿಠಲ್, ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಶೆಟ್ಟಿ, ಜಿ. ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ವರ್ತಕರ ಸಂಘದ ಅಧ್ಯಕ್ಷ ಸಹನಶೀಲ ಪೈ, ಶ್ರುತಿ ಶೆಣೈ, ಕುಸುಮಾ ವೆಂಕಟೇಶ್, ಮೋಹಿನಿ ಭಟ್, ಸರೋಜಾ ಶೆಟ್ಟಿಗಾರ್, ಕರ್ನಲ್ ಪ್ರಕಾಶ್ಚಂದ್ರ ಹಾಗೂ ಅಭಿಮಾನಿಗಳು ಇದ್ದರು.
ಮಹಾಮಾಯ ಭಜನಾ ಮಂಡಳಿ ಸದ್ಯಸರಿಂದ ಭಜನೆ ಕಾರ್ಯಕ್ರಮ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!