Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಬಿಜೆಪಿ ಕಚೇರಿಯಲ್ಲಿ ವೃಕ್ಷಾರೋಪಣ

ಬಿಜೆಪಿ ಕಚೇರಿಯಲ್ಲಿ ವೃಕ್ಷಾರೋಪಣ

ಉಡುಪಿ: ಕೃಷಿ ಸಚಿವ ಬಿ. ಸಿ. ಪಾಟೀಲ್ ಶನಿವಾರ ಉಡುಪಿ ನಗರ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪಕ್ಷದ ಸಂಸ್ಥಾಪಕ ರಾಷ್ಟ್ರೀಯ ವಾದಿ ಡಾ| ಶಾಮಪ್ರಸಾದ್ ಮುಖರ್ಜಿ ಸ್ಮರಣಾರ್ಥ ಪಕ್ಷ ಹಮ್ಮಿಕೊಂಡಿರುವ ವೃಕ್ಷಾರೋಪಣ ಕಾರ್ಯಕ್ರಮ ಪ್ರಯುಕ್ತ ನಗರ ಬಿಜೆಪಿ ಕಚೇರಿ ಆವರಣದಲ್ಲಿ ಗಿಡ ನೆಟ್ಟರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಜಿ. ಪಂ. ಮಾಜಿ ಅಧ್ಯಕ್ಷ ದಿನಕರಬಾಬು, ಪಕ್ಷ ಪ್ರಮುಖರಾದ ಶಿಲ್ಪಾ ಸುವರ್ಣ, ನಳಿನಿ ಪ್ರದೀಪ್ ರಾವ್, ಸತ್ಯಾನಂದ ನಾಯಕ್, ಗೀತಾಂಜಲಿ ಸುವರ್ಣ, ಗುರುಪ್ರಸಾದ್ ಶೆಟ್ಟಿ, ಗಿರೀಶ್ ಎಂ. ಅಂಚನ್, ಸುರೇಶ್ ಶೆಟ್ಟಿ ಗುರ್ಮೆ, ಶಿವಕುಮಾರ್, ಮಾರಾಳಿ ಪ್ರತಾಪ್ ಹೆಗ್ಡೆ, ವೀಣಾ ನಾಯ್ಕ, ಕಮಲಾಕ್ಷ ಹೆಬ್ಬಾರ್, ಅಶೋಕ್ ಹೇರೂರು, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಣಿಪಾಲ ಮತ್ತು ದಿನೇಶ್ ಅಮೀನ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!