Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಅಶ್ವತ್ಥ, ತಪಸೀ ವೃಕ್ಷ ನೆಡಲು ನಿರ್ಧಾರ

ಅಶ್ವತ್ಥ, ತಪಸೀ ವೃಕ್ಷ ನೆಡಲು ನಿರ್ಧಾರ

ಉಡುಪಿ: ಕೊರೊನಾ ನಿವಾರಣೆಗಾಗಿ ಮುಚ್ಲುಗೋಡು ಶ್ರೀ ಸುಬ್ರಹ್ಮಣ್ಯ ದೇವರಿಗೆ ಉಡುಪಿ ನಗರ ಬಿಜೆಪಿ ವತಿಯಿಂದ ಕಳೆದ ಭಾನುವಾರ ನಡೆಸಲಾದ ಸೀಯಾಳಾಭಿಷೇಕ ಸಂದರ್ಭ ಸಂಗ್ರಹವಾದ ಕಾಣಿಕೆ ಹಣದಲ್ಲಿ ಉಳಿಕೆ ಹಣದಿಂದ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚು ಆಮ್ಲಜನಕ ಪೂರೈಸುವ ಹಾಗೂ ದೀರ್ಘಕಾಲೀನ ಬಾಳಿಕೆ ವೃಕ್ಷಗಳಾದ ಅಶ್ವತ್ಥ ಹಾಗೂ ತಪಸೀ ತಲಾ 50 ವೃಕ್ಷಗಳನ್ನು ನೆಡಲು ನಿರ್ಧರಿಸಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಅಶ್ವತ್ಥ ವೃಕ್ಷ ಪೂಜನೀಯವೂ ಆಗಿದ್ದು, ತಪಸೀ ವೃಕ್ಷ ಬಹುದೂರದ ವರೆಗೆ ಶುದ್ಧ ಆಮ್ಲಜನಕ ಒದಗಿಸುವ ಸಾಮರ್ಥ್ಯ ಹೊಂದಿದೆ.

ವಿಶಾಲವಾಗಿ ಬೆಳೆಯುವ ಈ ವೃಕ್ಷಗಳನ್ನು ಮನೆ ಆವರಣಗಳಲ್ಲಿ ನೆಡುವುದು ಅಸಾಧ್ಯ. ಹಾಗಾಗಿ ರಸ್ತೆ ಬದಿ ಅಥವಾ ವಿಶಾಲ ಜಾಗ ಹೊಂದಿರುವ ಶಾಲೆ ಯಾ ಸಾರ್ವಜನಿಕ ಸಂಸ್ಥೆಗಳ ಆವರಣಗಳಲ್ಲಿ ಮಾತ್ರ ನೆಟ್ಟು ಪೋಷಿಸಬೇಕು. ಆದ್ದರಿಂದ ಅಂಥ ಸ್ಥಳದ ಲಭ್ಯತೆಯುಳ್ಳ, ನೆಟ್ಟು ಪೋಷಿಸಲು ಆಸಕ್ತರಾಗಿರುವವರು ಮಹೇಶ್ ಠಾಕೂರ್ 97417 29999 ಅಥವಾ ವಾಸುದೇವ ಭಟ್ ಪೆರಂಪಳ್ಳಿ 98458 95136 ಅವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!