Monday, August 15, 2022
Home ಸಮಾಚಾರ ರಾಜ್ಯ ವಾರ್ತೆ 'ಆ ತೊಂಭತ್ತು ದಿನಗಳು' ಶತ ದಿನ ಪೂರೈಸಲಿ

‘ಆ ತೊಂಭತ್ತು ದಿನಗಳು’ ಶತ ದಿನ ಪೂರೈಸಲಿ

ಸುದ್ದಿಕಿರಣ ವರದಿ
ಸೋಮವಾರ, ಜನವರಿ 3, 2022

ಆ ತೊಂಭತ್ತು ದಿನಗಳು ಶತ ದಿನ ಪೂರೈಸಲಿ

ಕುಂದಾಪುರ: ಸ್ಥಳೀಯ ಪ್ರತಿಭೆಗಳೊಂದಿಗೆ ಕುಂದಾಪುರದಲ್ಲಿ ಸಿನೆಮಾ ವೇದಿಕೆ ಸೃಷ್ಟಿಸಿ ಒಳ್ಳೆಯ ಒಂದು ಸಿನೆಮಾ‌ ಮಾಡಬಹುದು ಎನ್ನುವುದಕ್ಕೆ ಯಾಕೂಬ್ ಖಾದರ್ ಗುಲ್ವಾಡಿ ಅವರ ತಂಡ ನೀಡಿರುವ ಸಿನೆಮಾ ಆ ತೊಂಭತ್ತು ದಿನಗಳು. ಈ ಸಿನೆಮಾ ಚಿತ್ರಮಂದಿಗಳಲ್ಲಿ 100 ದಿನ ಯಶಸ್ವಿಯಾಗಿ  ಎಂದು ನಟ, ನಿರ್ದೇಶಕ ಋಷಬ್ ಶೆಟ್ಟಿ ಶುಭ ಹಾರೈಸಿದರು.

ಆದಿತ್ಯವಾರ ಸಂಜೆ ಗುಲ್ವಾಡಿಯಲ್ಲಿ ನಡೆದ ರೊನಾಲ್ಡ್ ಲೋಬೊ ಮತ್ತು ಯಾಕೂಬ್ ಖಾದರ್ ಗುಲ್ವಾಡಿ ನಿರ್ದೇಶನದ “ಆ ತೊಂಭತ್ತು ದಿನಗಳು” ಸಿನೆಮಾದ ಫಸ್ಟ್ ಲುಕ್ ಪೋಸ್ಟರ್, ಟ್ರೈಲರ್, ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಊರಲ್ಲಿ ರಾಜಕೀಯ, ಜಾತ್ರೆ ಮುಂತಾದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ಸಿನೆಮಾ‌ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ಕೊಟ್ಟಿದೆ. ಗುಲ್ವಾಡಿ ಟಾಕೀಸ್‌ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನವೇ ಅದ್ಭುತ. ಸಿನೆಮಾದ ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸಿನೆಮಾ ಖಂಡಿತವಾಗಿಯೂ ಯಶಸ್ವಿಯಾಗುತ್ತದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈ ಭಾಗದಲ್ಲಿ ಸಾಕಷ್ಟು ಪ್ರತಿಭೆಗಳು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ‘ಆ ತೊಂಭತ್ತು ದಿನಗಳು’ ಸಿನೆಮಾದ ಮೂಲಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಕ್ಕಿದೆ‌.

ಈ ಸಿನೆಮಾವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡುವಂತೆ ಮಾಡಬೇಕು ಎಂದರು.

ಉಡುಪಿ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾl ಜಿ. ಶಂಕರ್, ಸಹನಾ ಗ್ರೂಪ್ ನ ಸುರೆಂದ್ರ ಶೆಟ್ಟಿ, ಖ್ಯಾತ ವಕೀಲ ರವಿಕಿರಣ್ ಮುರುಡೇಶ್ವರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಜೋನ್ಸನ್‌ ಡಿʼಆಲ್ಮೇಡ, ಗುಲ್ವಾಡಿ ಗ್ರಾ.ಪಂ ಅಧ್ಯಕ್ಷ ಸುಧೀಶ್ ಶೆಟ್ಟಿ ಗುಲ್ವಾಡಿ, ಕುಂದಾಪುರ ಕಸಾಪ ಮಾಜಿ ಅಧ್ಯಕ್ಷ ಎ.ಎಸ್.ಎನ್ ಹೆಬ್ಬಾರ್, ಸುಬ್ರಹ್ಮಣ್ಯ ಶೆಟ್ಟಿ, ನಿರ್ದೇಶಕರಾದ ರೊನಾಲ್ಡ್ ಲೋಬೊ ಹಾಗೂ ಯಾಕೂಬ್ ಖಾದರ್ ಗುಲ್ವಾಡಿ, ನಾಯಕ‌ ನಟ ಹೃಥಿಕ್ ಮುರುಡೇಶ್ವರ ಮೊದಲಾದವರಿದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!