ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 23
ಶಾಸಕರಿಂದ ಬೆದರಿಕೆ: ಆರೋಪ
ಉಡುಪಿ: ಶನಿವಾರ ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಬೆದರಿಕೆ ಹಾಕಿದ್ದಾರೆ ಎಂದು ಹಿಜಾಬ್ ಪರ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ಈ ರೀತಿ ಟ್ವೀಟ್ ಮಾಡಿದ ಅಲಿಯಾ ಅಸಾದಿ, ‘ನಾವು ಮಾಡಿರುವ ಅಪರಾಧವಾದರೂ ಏನು? ದೇಶ ಎತ್ತ ಸಾಗುತ್ತಿದೆ?’ ಎಂದು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ನನಗೆ ಹಾಗೂ ರೇಶಮ್ ಗೆ ಅನುಮತಿ ನಿರಾಕರಿಸಲಾಗಿದೆ. ಪದೇ ಪದೇ ನಮ್ಮನ್ನು ನಿರಾಶೆಗೊಳಿಸಲಾಗುತ್ತಿದೆ’ ಎಂದೂ ಆಲಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ