ಉಡುಪಿ: ಛತ್ರಪತಿ ಶಿವಾಜಿಯ ಬೃಹತ್ ಕೊಲಾಜ್ ಕೃತಿ ರಚಿಸಲಾಗಿದ್ದು, ಗಿನೆಸ್ ದಾಖಲೆಗೆ ಯತ್ನಿಸಲಾಗುತ್ತಿದೆ.
ಶಿವಾಜಿ ಜಯಂತಿ ಅಂಗವಾಗಿ ಪಲಿಮಾರು ಚಿತ್ರಾಲಯ ಆರ್ಟ್ ಗ್ಯಾಲರಿ ಮತ್ತು ವರ್ಣ ಕಲಾವಿದರ ತಂಡ, ಕಲಾವಿದ ವೆಂಕಿ ಪಲಿಮಾರು ನೇತೃತ್ವದಲ್ಲಿ ಸುಮಾರು 4 ಕ್ವಿಂಟಾಲ್ ಹಳೆಯ ಪತ್ರಿಕೆ, 7 ಕೆಜಿ ಫೆವಿಕಾಲ್ ಬಳಸಿ ಸತತ ಹತ್ತು ದಿನಗಳ ಪರಿಶ್ರಮದಿಂದ ಕಲಾಕೃತಿ ರಚಿಸಲಾಗಿದೆ.
ಕಲಾವಿದರಾದ ವರ್ಣಿತಾ ಕಾಮತ್, ಪದ್ಮಾವತಿ ಕಾಮತ್, ಶಕುಂತಲಾ ಶೆಣೈ, ಉಷಾದೇವಿ, ರಾಧಿಕಾ ಭಟ್, ಜ್ಯೋತಿ ಶೇಟ್, ಲಾರೆನ್ಸ್ ಪಿಂಟೊ, ಶ್ರವಣ ಕುಮಾರ್ ಮತ್ತು ವೆಂಕಿ ಪಲಿಮಾರು ಸುಮಾರು 21 ಅಡಿ ಅಗಲ ಮತ್ತು 30 ಅಡಿ ಉದ್ದದ ಕಲಾಕೃತಿ ರಚಿಸಿದ್ದಾರೆ.