Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಛಾಯಾಗ್ರಾಹಕ‌ ಶಿವ ಅಮೀನ್ ನಿಧನ

ಛಾಯಾಗ್ರಾಹಕ‌ ಶಿವ ಅಮೀನ್ ನಿಧನ

ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 4, 2022

ಛಾಯಾಗ್ರಾಹಕ ಶಿವ ಅಮೀನ್ ನಿಧನ
ಉಡುಪಿ: ಹಿರಿಯ ಛಾಯಾಚಿತ್ರಗ್ರಾಹಕ ಶಿವ ಕೆ. ಅಮೀನ್ (73) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.

ಕೆಮ್ಮಣ್ಣಿನಲ್ಲಿ ಆದರ್ಶ ಸ್ಟುಡಿಯೊ ಹೊಂದಿದ್ದ ಅವರು ಉತ್ತಮ ಛಾಯಾಗ್ರಾಹಕರಾಗಿದ್ದರು.
ಕಪ್ಪು ಬಿಳುಪು ಛಾಯಾಚಿತ್ರದಿಂದ ತೊಡಗಿ ಡಿಜಿಟಲ್ ಮಾಧ್ಯಮದ ವರೆಗೆ ಆ ರಂಗದ ಎಲ್ಲ ಮಟ್ಟುಗಳನ್ನು ಅರಿತಿದ್ದ ಅಮೀನ್ ಉತ್ತಮ ಕ್ರೀಡಾಪಟುವೂ ಆಗಿದ್ದರು.

ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಉಡುಪಿ ವಲಯದ ಗೌರವಾಧ್ಯಕ್ಷರಾಗಿ, ಫೋಟೊಗ್ರಾಫರ್ಸ್ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಕೇಂದ್ರ ಸಮಿತಿಯ ಸಲಹಾ ಸಮಿತಿ ಸದಸ್ಯರಾಗಿ ಉತ್ತಮ ಸಂಘಟಕರಾಗಿದ್ದರು.

ಕಿದಿಯೂರಿನ ಸಂಕೇಶ ಅಮೀನ್ ಕುಟುಂಬಸ್ಥರ ದೈವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷರೂ ಆಗಿದ್ದರು.

ಮೃತರು ಓರ್ವ ಪುತ್ರ ಹಾಗೂ ಒಬ್ಬಾಕೆ ಪುತ್ರಿಯನ್ನು ಅಗಲಿದ್ದಾರೆ.

ಶಿವ ಕೆ. ಅಮೀನ್‌ ನಿಧನಕ್ಕೆ ಸೌತ್ ಕೆನರಾ ಪೋಟೊಗ್ರಾಫರ್ಸ್ ಅಸೋಸಿಯೇಶನ್ ಸದಸ್ಯರು ಹಾಗೂ ಪದಾಧಿಕಾರಿಗಳು ‌ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!