Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಶುದ್ಧ ಮನದ ಸಂಕಲ್ಪದಿಂದ ಕಾರ್ಯಸಿದ್ಧಿ

ಶುದ್ಧ ಮನದ ಸಂಕಲ್ಪದಿಂದ ಕಾರ್ಯಸಿದ್ಧಿ

ಉಡುಪಿ: ಪರಿಶುದ್ಧ ಮನಸ್ಸಿನ ಸಂಕಲ್ಪದಿಂದ ಲೋಕ ಕಲ್ಯಾಣಾರ್ಥವಾಗಿ ಮಾಡುವ ಪುಣ್ಯಪ್ರದ ಧಾರ್ಮಿಕ ಕಾರ್ಯಗಳಿಂದ ದೇವತಾನುಗ್ರಹ ಪ್ರಾಪ್ತಿಯಾಗಿ ಧನ್ಯತಾ ಭಾವ ಮೂಡುತ್ತದೆ. ಈ ನಿಟ್ಟಿನಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ನಡೆಯಲಿರುವ ರಾಶಿಪೂಜೆ ಮಹೋತ್ಸವದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಮಹೋತ್ಸವದ ಯಶಸ್ಸಿಗೆ ಶ್ರಮಿಸೋಣ ಎಂದು ಮೀನುಗಾರರ ಹಿರಿಯ ಮುಂದಾಳು ಕಾಂತಪ್ಪ ಕರ್ಕೇರ ಹೇಳಿದರು.
ಕೊಡವೂರು ಶ್ರೀ ಶಂಕರನಾರಾಯಣ ದೇವಾಲಯದಲ್ಲಿ ಮುಂದಿನ ಫೆ. 4ರಂದು ನಡೆಯಲಿರುವ ರಾಶಿಪೂಜೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಬಗ್ಗೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದರು.
ದೇವಳದ ಪ್ರಧಾನ ತಂತ್ರಿ ಪುತ್ತೂರು ಹಯವದನ ತಂತ್ರಿ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಶ್ರೀಶಂ ಭಕ್ತವೃಂದ ಅಧ್ಯಕ್ಷ ರವಿರಾಜ್ ಹೆಗ್ಡೆ, ನಗರಸಭಾ ಸದಸ್ಯ ವಿಜಯ ಕೊಡವೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಧುಸೂದನ ತಂತ್ರಿ, ನಗರಸಭೆ ಮಾಜಿ ಅಧ್ಯಕ್ಷೆ ಮೀನಾಕ್ಷಿ ಮಾಧವ, ಮತ್ಸ್ಯೋದ್ಯಮಿಗಳಾದ ಸಾಧು ಸಾಲ್ಯಾನ್, ಆನಂದ ಪಿ. ಸುವರ್ಣ ಮತ್ತು ನಾಗರಾಜ್ ಸುವರ್ಣ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಡಿಗ ಕೃಷ್ಣಮೂರ್ತಿ ಭಟ್, ಭಾಸ್ಕರ ಪಾಲನ್, ರಾಜ ಎ. ಸೇರಿಗಾರ್, ಚಂದ್ರಕಾಂತ ಪುತ್ರನ್, ಬಾಬ ಕೆ. ಮತ್ತು ಸುಧಾ ಎನ್. ಶೆಟ್ಟಿ, ಸ್ಥಳೀಯರಾದ ಕೆ. ಟಿ. ಪೂಜಾರಿ, ಕೆ. ಕಾಳು ಸೇರಿಗಾರ್, ಟಿ. ಚಂದ್ರಶೇಖರ್, ಗೋವಿಂದ ಐತಾಳ್, ಶಿವಪ್ಪ ಟಿ. ಕಾಂಚನ್, ಶೇಷಪ್ಪ ಕುಂದರ್, ಶ್ರೀನಿವಾಸ ಬಾಯರಿ, ರಾಮ ಸೇರಿಗಾರ್, ಕೋದಂಡರಾಮ ಭಟ್, ಸುರೇಶ್ ಕುಡಾರ್ ತೋಟ, ಕೃಷ್ಣ ಎಸ್. ಅಮೀನ್, ರಮೇಶ್ ಶೆಟ್ಟಿ ಮೂಡುಬೆಟ್ಟು, ರತ್ನಾಕರ್ ಕೋಟ್ಯಾನ್, ಚಂದ್ರಕಾಂತ ಶೆಟ್ಟಿಗಾರ್, ಶಕುಂತಳಾ ಸದಾನಂದ, ಸರೋಜಿನಿ ವಿಜಯ್, ಸುಶೀಲ್ ಜಯಕರ ಇದ್ದರು.
ಸಭೆಯ ಕೊನೆಯಲ್ಲಿ ರಾಶಿಪೂಜೆ ಮಹೋತ್ಸವಕ್ಕೆ ಸಾಂಕೇತಿಕವಾಗಿ ಹುಂಡಿ ಕಾಣಿಕೆ ಸಮರ್ಪಿಸಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಸದಸ್ಯ ಜನಾರ್ದನ ಕೊಡವೂರು ಪ್ರಸ್ತಾವನೆಗೈದರು. ಸತೀಶ್ ಕೊಡವೂರು ನಿರೂಪಿಸಿದರು. ಬಾಲಕೃಷ್ಣ ಕೊಡವೂರು ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!