Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕ್ರಾಂತಿವೀರ ಸಂಗೊಳ್ಳಿ ಜಯಂತ್ಯುತ್ಸವ

ಕ್ರಾಂತಿವೀರ ಸಂಗೊಳ್ಳಿ ಜಯಂತ್ಯುತ್ಸವ

ಕ್ರಾಂತಿವೀರ ಸಂಗೊಳ್ಳಿ ಜಯಂತ್ಯುತ್ಸವ

(ಸುದ್ದಿಕಿರಣ ವರದಿ)
ಉಡುಪಿ: ಸ್ವಾತಂತ್ರ್ಯದ ಕಿಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 225ನೇ ಜಯಂತ್ಯುತ್ಸವವನ್ನು ಇಲ್ಲಿನ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಆಶ್ರಯದಲ್ಲಿ ಭಾನುವಾರ ಆಚರಿಸಲಾಯಿತು.

ಆ ಪ್ರಯುಕ್ತ ರಾಯಣ್ಣನ ಭಾವಚಿತ್ರ ಮೆರವಣಿಗೆ ಪೂರ್ಣಕುಂಭ, ಚಂಡೆ ವಾದನದೊಂದಿಗೆ ಮೆರವಣಿಗೆ ನಗರದ ಸಿಟಿ ಬಸ್ ನಿಲ್ದಾಣದಿಂದ ಆರಂಭಿಸಿ, ನಗರದ ವಿವಿಧ ಮಾರ್ಗಗಳಲ್ಲಿ ಸಾಗಿ ಬಂದು ಆದಿವುಡುಪಿ ರೀಗಲ್ ನೆಕ್ಸ್ಟ್ ಕಟ್ಟಡದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಕೇಂದ್ರ ಕಚೇರಿ ಬಳಿ ಸಮಾಪನಗೊಂಡಿತು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆ ಮುಖ್ಯಸ್ಥ ಹಫೀಜ್ ರೆಹಮಾನ್ ಮೆರವಣಿಗೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಜಿಲ್ಲಾಧ್ಯಕ್ಷ ಸಿದ್ದಬಸಯ್ಯಸ್ವಾಮಿ ಚಿಕ್ಕಮಠ, ಗೌರವ ಸಲಹೆಗಾರ ಜನಾರ್ದನ್ ಕೊಡವೂರು, ರಾಘವೇಂದ್ರ ನಾಯಕ್, ಪೂರ್ಣಿಮಾ ಜನಾರ್ದನ್, ಉಮಾ ಸಿದ್ಧಬಸಯ್ಯ, ಸವಿತಾ ನೋಟಗಾರ್, ಕರಾವಳಿ ಕುರುಬರ ಸಂಘ ಮಂಗಳೂರು ಅಧ್ಯಕ್ಷ ಮಂಜುನಾಥ ವೈ. ನೋಟಗಾರ, ಲಕ್ಷ್ಮಣ್ ಕೋಲ್ಕಾರ್, ಮಹೇಶ್ ಗುಂಡಿಬೈಲು, ಕುಮಾರ್ ಪ್ರಸಾದ್, ವಿಠ್ಠಲ್, ರಮೇಶ್ ಎಂಜಿಎಂ, ಶರಣಪ್ಪ ಎಂಜಿಎಂ, ಗಣೇಶ್ ಪಾತ್ರೋಟಿ, ಹನುಮಂತರಾಯ ಪೂಜಾರ್, ಸಿದ್ದು ಪೂಜಾರ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!