Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಸಂತ್ರಸ್ತರ ರಕ್ಷಣೆ

ಸಂತ್ರಸ್ತರ ರಕ್ಷಣೆ

ಉಡುಪಿ: ತೌಕ್ತೆ ಚಂಡಮಾರುತ ಪ್ರಭಾವದಿಂದ ಉಡುಪಿಯಾದ್ಯಂತ ಭಾರಿ ಗಾಳಿ ಮಳೆಯಾಗಿದ್ದು, ಕೋಡಿಬೆಂಗ್ರೆ ಭಾಗದಲ್ಲಿ ನದಿಮಟ್ಟದಿಂದ ನೀರು ಮೇಲೆ ಬಂದು ಕೆಲವು ಮನೆಗಳಿಗೆ ಹಾನಿ ಉಂಟಾಗಿತ್ತು. ಹಲವೆಡೆ ತಡೆಗೋಡೆ ನೀರು ಪಾಲಾಗಿದೆ. ಪ್ರಕ್ಷುಭ್ಧವಾದ ನದಿ, ಅಪಾಯ ಮಟ್ಟ ಮೀರಿ ಹಿರಿದಿದ್ದು ಬ್ರಹ್ಮಾವರ ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಕೋಡಿ ಗ್ರಾಮ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕೋಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿನಯ್ ಅಮೀನ್, ಪ್ರಸಾದ್, ಕುಸುಮ ಖಾರ್ವಿ ಇದ್ದರು.

ಸ್ಥಳೀಯರಾದ ನಾಗರಾಜ್ ಕುಂದರ್, ವಿಶ್ವನಾಥ ಶ್ರೀಯಾನ್, ಮನೋಹರ್ ಕುಂದರ್, ಜಯ ಖಾರ್ವಿ, ಗಿರೀಶ್ ಖಾರ್ವಿ, ಚೂಡಾ ಖಾರ್ವಿ, ಸದಾನಂದ ಕುಂದರ್, ಅಶ್ವಥ ಅಮೀನ್, ವಿವೇಕ್ ಪುತ್ರನ್, ಯೋಗೀಶ್ ಖಾರ್ವಿ ಸಹಕರಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!