Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಸಂಪುಟ ದರ್ಜೆ ಸ್ಥಾನಮಾನ ಬೇಡವೆಂದ ಯಡಿಯೂರಪ್ಪ

ಸಂಪುಟ ದರ್ಜೆ ಸ್ಥಾನಮಾನ ಬೇಡವೆಂದ ಯಡಿಯೂರಪ್ಪ

ಸಂಪುಟ ದರ್ಜೆ ಸ್ಥಾನಮಾನ ಬೇಡವೆಂದ ಯಡಿಯೂರಪ್ಪ
(ಸುದ್ದಿಕಿರಣ ವರದಿ)

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದ ಸಂಪುಟ ದರ್ಜೆ ಸ್ಥಾನಮಾನವನ್ನು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನಿರಾಕರಿಸಿದ್ದಾರೆ.

ವಿಶೇಷ ಸ್ಥಾನಮಾನದ ಆದೇಶ ವಾಪಾಸು ಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ತನಗೆ ಮುಖ್ಯಮಂತ್ರಿ ಅವಕಾಶ ಕಲ್ಪಿಸಿದ್ದ ಯಡಿಯೂರಪ್ಪನವರಿಗೆ ಕೃತಜ್ಞತಾಪೂರ್ವಕವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ದರ್ಜೆ ಸ್ಥಾನಮಾನ ನೀಡುವಂತೆ ಆದೇಶ ಮಾಡಿದ್ದರು. ಆದರೆ, ಯಡಿಯೂರಪ್ಪ ಆದೇಶ ಹೊರಟ 24 ಗಂಟೆಯೊಳಗೆ ಅದನ್ನು ತಿರಸ್ಕರಿಸಿದ್ದಾರೆ.

ನಿಕಟಪೂರ್ವ ಮುಖ್ಯಮಂತ್ರಿಗೆ ಸರಕಾರದಿಂದ ನೀಡುವ ಸೌಲಭ್ಯ ಮಾತ್ರ ನನಗೆ ಸಾಕು. ಸಂಪುಟ ದರ್ಜೆ ಸ್ಥಾನಮಾನ ಬೇಡ ಎಂದು ಯಡಿಯುರಪ್ಪ ವಿನಂತಿಸಿದ್ದಾರೆ.

ತನ್ನ ಮುಖ್ಯಮಂತ್ರಿ ಅವಧಿ ವರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವಂತೆ ಸಿಎಂ ಬೊಮ್ಮಾಯಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕ ಆದೇಶ ಹೊರಡಿಸಿದ್ದರು.

ಸಂಪುಟ ದರ್ಜೆ ಸಚಿವರಿಗೆ ಸಿಗುವ ಎಲ್ಲಾ ಸೌಲಭ್ಯಗಳಾದ ಸರಕಾರಿ ನಿವಾಸ, ಎಸ್ಕಾರ್ಟ್, ಪೈಲಟ್ ವಾಹನಗಳು, ಗನ್ ಮ್ಯಾನ್ ಸೌಲಭ್ಯ ಇತ್ಯಾದಿ ಬಿ.ಎಸ್.ವೈ.ಗೆ ಲಭ್ಯವಾಗಿತ್ತು.

ಆದರೆ, ಯಡಿಯೂರಪ್ಪ ಅವೆಲ್ಲವನ್ನೂ ನಿರಾಕರಿಸಿದ್ದಾರೆ.

ಬೊಮ್ಮಾಯಿ ಆದೇಶದಿಂದ ರಾಜಕೀಯ ವಲಯದಲ್ಲಿ ಆಕ್ಷೇಪಾರ್ಹ ಧ್ವನಿಯೂ ಕೇಳಿಬಂದಿತ್ತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!