Thursday, July 7, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಸಂಸತ್ ಗ್ರಂಥಾಲಯಕ್ಕೆ ಮಹಾಭಾರತ ಪ್ರತಿ ಕೊಡುಗೆ

ಸಂಸತ್ ಗ್ರಂಥಾಲಯಕ್ಕೆ ಮಹಾಭಾರತ ಪ್ರತಿ ಕೊಡುಗೆ

(ಸುದ್ದಿಕಿರಣ ವರದಿ)

ನವದೆಹಲಿ, ನ. 10: ಸುಮಾರು ನೂರು ವರ್ಷಗಳ ಬಳಿಕ ಸಮಗ್ರವಾಗಿ ಪ್ರಕಟವಾಗಿರುವ ಮಹಾಭಾರತದ ಸಂಸ್ಕೃತದ 24 ಸಂಪುಟಗಳ ಒಂದು ಪ್ರತಿಯನ್ನು ಸಂಸತ್ ಭವನದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಾಯಿತು.

 

ಉಡುಪಿ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದ್ವಿತೀಯ ಪರ್ಯಾಯ ಅವಧಿಯಲ್ಲಿ ಶ್ರೀಮಠದ ತತ್ವ ಸಂಶೋಧನ ಸಂಸತ್ ವತಿಯಿಂದ ಶ್ರೀಗಳ ನೇತೃತ್ವದಲ್ಲಿ ಪ್ರಕಟಗೊಂಡು ವಿಷ್ಣೈಕ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸಹಿತ ಅಷ್ಟಮಠಾಧೀಶರು ಮತ್ತು ಅನೇಕ ಮಾಧ್ವ ಯತಿಗಳ ಉಪಸ್ಥಿತಿಯಲ್ಲಿ ಉಡುಪಿ ಕೃಷ್ಣಮಠದಲ್ಲಿ ಲೋಕಾರ್ಪಣೆಗೊಂಡಿತ್ತು.

ದೆಹಲಿಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಷಿ ನಿವಾಸದಲ್ಲಿ ಭೇಟಿ ಮಾಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗ್ರಂಥದ ಪ್ರತಿ ಹಸ್ತಾಂತರಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಸಂಯೋಜಿಸಿದ್ದರು.

ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ, ಅನಂತ ಜಿ ಎ., ಕೃಷ್ಣ ಭಟ್, ಮಠದ ದೆಹಲಿ ಶಾಖೆ ವ್ಯವಸ್ಥಾಪಕ ದೇವಿಪ್ರಸಾದ್ ಭಟ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!