ಸಚಿವ ಕೋಟ ಜೊತೆ ದಲಿತರ ಸಂವಾದ
(ಸುದ್ದಿಕಿರಣ ವರದಿ)
ಉಡುಪಿ: ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ಯುವಸೇನೆ ನಾಯಕರು ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಂವಾದ ನಡೆಸಿದರು.
ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಗೆ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣ, ದಲಿತ ಕುಟುಂಬದ ವಾರ್ಷಿಕ ಆದಾಯ ಮಿತಿ ಹೆಚ್ಚಳ, ಡಿ.ಸಿ ಮನ್ನಾ ಭೂಮಿಯನ್ನು ಅರ್ಹ ಭೂರಹಿತ ಫಲಾನುಭವಿಗಳಿಗೆ ಹಂಚಿಕೆ, ಕೊರಗ ಸಮುದಾಯದ ಅಭಿವೃದ್ಧಿಗೆ ರೂಪಿಸಲಾದ ಯೋಜನೆಯನ್ನು ಇತರ ಜಾತಿಯವರ ಪಾಲಾಗುತ್ತಿರುವ ಬಗ್ಗೆ, ಬ್ಯಾಕ್ ಲಾಗ್ ಹುದ್ದೆಯನ್ನು ಶೀಘ್ರದಲ್ಲಿ ಭರ್ತಿಗೊಳಿಸುವಂತೆ ಹಾಗೂ ಕುಂದಾಪುರ ಬೈದೂರು ತಾಲೂಕಿನ ದಲಿತರ ವಿವಿಧ ಸಮಸ್ಯೆ ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯದ ಪರಿಶಿಷ್ಟ ಜಾತಿ ಜನರ ಅಭಿವೃದ್ಧಿಗೆ ಪೂರಕವಾದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ವಿಠಲದಾಸ್ ಬನ್ನಂಜೆ, ದಲಿತ ಮುಖಂಡರಾದ ಮಂಜುನಾಥ ಗಿಳಿಯಾರು, ವಾಸುದೇವ ಬನ್ನಂಜೆ, ರಾಜು ಬೆಟ್ಟಿನಮನೆ, ಸಂಜೀವ ಬಳ್ಕೂರು, ಅಂಬೇಡ್ಕರ್ ಯುವಸೇನೆಯ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ಗುಣವಂತ ತೊಟ್ಟಂ, ಸುಮಿತ್ ನೆರ್ಗಿ, ದಿನೇಶ್ ಮೂಡಬೆಟ್ಟು, ರಾಮೋಜಿ ಬಲರಾಮನಗರ, ಮೋಹನದಾಸ್ ಚಿಟ್ಪಾಡಿ, ಗೀತಾ ಸುರೇಶ್, ಚೈತ್ರ, ನರಸಿಂಹ ಹಳಗೇರಿ, ಪ್ರಭಾಕರ್ ಕುಂದಾಪುರ, ನಾಗರಾಜ ಉಪ್ಪುಂದ ಮೊದಲಾದವರು ಭಾಗವಹಿಸಿದ್ದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಗೌರವಿಸಲಾಯಿತು.
ಕುಮಾರ್ ಕೋಟ ಸ್ವಾಗತಿಸಿ, ಗೋಪಾಲ ಗಿಳಿಯಾರು ವಂದಿಸಿದರು