ಉಡುಪಿ: ರಾಜ್ಯ ಮಂತ್ರಿಮಂಡಲ ವಿಸ್ತರಣೆಯಾದಲ್ಲಿ ಆದ್ಯತೆ ಮೇರೆಗೆ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಥವಾ ಸುನಿಲ್ ಕುಮಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಚಿವರಾಗಲು ಅವರಿಬ್ಬರೂ ಅರ್ಹರು ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಹಿರಿಯ ಶಾಸಕರಾಗಿದ್ದು ಸಚ್ಚಾರಿತ್ರ್ಯ, ಉತ್ತಮ ವ್ಯಕ್ತಿತ್ವದವರಾಗಿದ್ದಾರೆ. ಅವರಿಂದ ಬಿಜೆಪಿಗೆ ಉತ್ತಮ ಗೌರವ ಇದೆ. ಅದೇ ರೀತಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಿಂದುಳಿದ ವರ್ಗದ ನಾಯಕ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಂಘಟನಾ ಚಾತುರ್ಯವುಳ್ಳವರು. ಇವರಿಬ್ಬರಿಗೂ ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ಒಳ್ಳೆಯದು ಎಂದರು ಭಟ್ ಶಿಫಾರಸು ಮಾಡಿದರು