Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಶ್ರದ್ಧಾಭಕ್ತಿಯ ಸತ್ಕರ್ಮದಿಂದ ಅಧಿಕ ಫಲ

ಶ್ರದ್ಧಾಭಕ್ತಿಯ ಸತ್ಕರ್ಮದಿಂದ ಅಧಿಕ ಫಲ

ಸುದ್ದಿಕಿರಣ ವರದಿ
ಮಂಗಳವಾರ, ಮೇ 17

ಶ್ರದ್ಧಾಭಕ್ತಿಯ ಸತ್ಕರ್ಮದಿಂದ ಅಧಿಕ ಫಲ
ಕಾರ್ಕಳ: ಭಾರತೀಯ ಸಂಸ್ಕೃತಿಯ ಜೊತೆಗೆ ನಮ್ಮ ಧರ್ಮ, ಸಂಸೃತಿಯ ಪಾಲನೆ ಮಾಡುವುದು ನಮ್ಮ ಕರ್ತವ್ಯ ಎಂದು ಶ್ರೀಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಹಿರ್ಗಾನ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮೀ ದೇವಳದ ಮಾಜಿ ಆಡಳಿತ ಮೊಕ್ತೇಸರ ಹಾಗೂ ಬಹುಭಾಷಾ ಕವಿ, ಸಾಹಿತಿ ಎರ್ಲಪಾಡಿ ಶೆಟ್ಟಿಬೆಟ್ಟು ನಾರಾಯಣ ಗವಲ್ಕರ್ ಅವರ ನೂತನ ವಾಸ್ತುವಿನಲ್ಲಿ ಸಹಸ್ರ ಚಂದ್ರದರ್ಶನ ಶಾಂತಿ ಧಾರ್ಮಿಕ ಅನುಷ್ಠಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಗುರು ಪರಂಪರೆಯ ಪಾಲನೆಯಿಂದ ಕರ್ತವ್ಯ ಮಾಡಿದಾಗ ಮುಕ್ತಿ ಸಿಗುತ್ತದೆ. ಕಲಿಯುಗದಲ್ಲಿ ಪ್ರಾರ್ಥನೆ, ದಾನ ಧರ್ಮಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗಿದೆ. ಮನುಷ್ಯ ಜೀವನದಲ್ಲಿ ಮಾಡುವ ನಿರಂತರ ಪ್ರಯತ್ನಗಳೇ ಸಾಧನೆಗೆ ಅವಕಾಶ ಮಾಡಿಕೊಡುತ್ತವೆ. ಭೂಮಿಯಲ್ಲಿ ಯಾವುದೂ ಶಾಶ್ವತವಲ್ಲ. ಶ್ರದ್ಧಾಭಕ್ತಿಭಾವದಿಂದ ಮಾಡುವ ಕರ್ಮಗಳೇ ಸತ್ಕರ್ಮಗಳಾಗಿದ್ದು ಉತ್ತಮ ಫಲ ನೀಡುತ್ತವೆ. ಸಮಾಜದ ಸಹಭಾಗಿತ್ವದಲ್ಲಿ ಮಾಡುವ ಕಾರ್ಯಗಳು ಶ್ರೇಷ್ಠವಾಗಿದ್ದು ಅಧಿಕ ಫಲ ನೀಡುತ್ತವೆ ಎಂದರು.

ಈ ಸಂದರ್ಭದಲ್ಲಿ ಗವಲ್ಕರ್ ಕನ್ನಡ ಕವಿತೆಗಳು ಮತ್ತು ಸುಭಾಷಿತಗಳು ಕವನ ಸಂಕಲನಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಗವಲ್ಕರ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರ್ರೀಮಠದ ಪುರೋಹಿತ ಮಹೇಶ್ ಭಟ್, ಶ್ರೀಮಠದ ವಿಶ್ವಸ್ಥ ಎಂ. ಗೋಕುಲದಾಸ್ ನಾಯಕ್, ಉಡುಪಿ ಶಾಖಾಮಠ ಅಧ್ಯಕ್ಷ ಸಂತೋಷ್ ವಾಗ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ, ಗವಲ್ಕರ್ ಕುಟುಂಬಸ್ಥರು, ಶಿವಾನಂದ ಗವಲ್ಕರ್, ರಘುಪತಿ ಗವಲ್ಕರ್, ಧಾರ್ಮಿಕ ಅನುಷ್ಠಾನಗಳ ಪ್ರಧಾನ ವೈದಿಕ ಶ್ರೀಕಾಂತ ಭಟ್ ಗೋವಾ, ಕುಲಪುರೋಹಿತ ವ್ಯಾಸರಾಯ ಭಟ್ ಲಕ್ಷ್ಮೀಪುರ, ಸುಬ್ರಹ್ಮಣ್ಯ ಭಟ್ ಮೊದಲಾದವರಿದ್ದರು.

ಶಿಕ್ಷಕ ಬಾಲಕೃಷ್ಣ ನಾಯಕ್ ನಿರೂಪಿಸಿ, ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!