Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಸಮಾಜಮುಖಿ ಕಾರ್ಯಗಳಿಗೆ ನೆರವು

ಸಮಾಜಮುಖಿ ಕಾರ್ಯಗಳಿಗೆ ನೆರವು

ಸುದ್ದಿಕಿರಣ ವರದಿ
ಸೋಮವಾರ, ಜುಲೈ 25

ಸಮಾಜಮುಖಿ ಕಾರ್ಯಗಳಿಗೆ ನೆರವು
ಉಡುಪಿ: ಉದ್ಯಮಿ, ಮಾಜಿ ಲಯನ್ಸ್ ಗವರ್ನರ್ ವಿ. ಜಿ. ಶೆಟ್ಟಿ ಅವರು ಉಡುಪಿ ಮಿಡ್ ಟೌನ್ ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗ, ಇನ್ನಂಜೆ ಶಾಲಾ ಮಕ್ಕಳ ಯುನಿಫಾರ್ಮ್ ಮತ್ತು ಇನ್ನಂಜೆ ಆಂಗ್ಲ ಮಾಧ್ಯಮ ಶಾಲಾಭಿವೃದ್ಧಿ ಕಾರ್ಯಗಳಿಗೆ ಅನುಕ್ರಮವಾಗಿ 2 ಲಕ್ಷ, 62 ಸಾವಿರ ಮತ್ತು 50 ಸಾವಿರ ರೂ. ಸಹಾಯಧನದ ಚೆಕ್ ವಿತರಿಸಿದರು.

ಯಕ್ಷಗಾನ ಕಲಾರಂಗದ ಪರವಾಗಿ ಚೆಕ್ ಸ್ವೀಕರಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್, ನಮ್ಮ ಸಂಸ್ಥೆಯ ಉಪಾಧ್ಯಕ್ಷರೂ ಹೆಮ್ಮೆಯ ಕಾರ್ಯಕರ್ತರೂ ಆಗಿರುವ ವಿ. ಜಿ. ಶೆಟ್ಟಿಯವರಂಥ ಉದಾರಿಗಳಿಂದ ಸಂಸ್ಥೆ ಸಮಾಜ ಪರ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ಸಂಸ್ಥೆ ಮಾಡುತ್ತಿರುವ ಕಾರ್ಯಕ್ರಮಗಳ ಕಿರು ಪರಿಚಯ ಮಾಡಿದರು.

ಈ ಸಂದರ್ಭದಲ್ಲಿ ಕಲಾರಂಗ ಕಾರ್ಯದರ್ಶಿ ಮುರಲಿ ಕಡೆಕಾರ್, ಪ್ರೊ. ನಾರಾಯಣ ಎಂ. ಹೆಗಡೆ, ಎ. ನಟರಾಜ ಉಪಾಧ್ಯಾಯ ಇದ್ದರು.

ವಿ. ಜಿ. ಶೆಟ್ಟಿ ಕಳೆದ ಕೆಲವು ವರ್ಷದಿಂದ ಯಕ್ಷಗಾನ ಕಲಾರಂಗ ಮತ್ತು ತಾನು ಕಲಿತ ಶಾಲೆಗೆ ನಿರಂತರ ಸಹಾಯಧನ ನೀಡುತ್ತಾ ಬಂದಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!