ದೇವಸ್ಥಾನಗಳನ್ನು ಸರಕಾರದ ಮುಷ್ಟಿಯಿಂದ ಮುಕ್ತಗೊಳಿಸುವ ನಿರ್ಧಾರ ಶ್ಲಾಘನೀಯ
ಉಡುಪಿ: ಹಿಂದೂ ದೇವಸ್ಥಾನಗಳ ಮೇಲಿನ ಹಿಡಿತವನ್ನು ಸಡಿಲಗೊಳಿಸಿ, ಅವುಗಳನ್ನು ಕಾಯ್ದೆಯ ಕಟ್ಟುಪಾಡುಗಳಿಂದ ಮುಕ್ತಗೊಳಿಸುವ ಕಾಯ್ದೆ ಜಾರಿಗೊಳಿಸುವ ಬಗ್ಗೆ ರಾಜ್ಯ ಸರಕಾರ ಕೈಗೊಂಡ ನಿರ್ಧಾರ ಶ್ಲಾಘನೀಯ. ಅದನ್ನು ಹಿಂದೂ ಜನಜಾಗೃತಿ ಸಮಿತಿ ಸ್ವಾಗತಿಸುತ್ತದೆ ಎಂದು ಸಮಿತಿ ರಾಜ್ಯ ವಕ್ತಾರ ಮೋಹನ ಗೌಡ ತಿಳಿಸಿದ್ದಾರೆ.
ರಾಜ್ಯದಲ್ಲಿ 34 ಸಾವಿರಕ್ಕೂ ಅಧಿಕ ಹಿಂದೂ ದೇವಸ್ಥಾನಗಳು ಸರಕಾರದ ಕಪಿಮುಷ್ಟಿಯಲ್ಲಿವೆ. ಕೆಲವು ಭ್ರಷ್ಟ ಅಧಿಕಾರಿಗಳಿಂದ ದೇವಸ್ಥಾನಗಳ ಅಭಿವೃದ್ಧಿಯಾಗದೇ ದೇವಸ್ಥಾನಗಳ ಕೋಟ್ಯಂತರ ರೂಪಾಯಿ ದೇವನಿಧಿಯನ್ನು ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೇ ಎಷ್ಟೋ ಕಡೆಗಳಲ್ಲಿ ಸರಕಾರದ ಯೋಜನೆಗಳು ಅನ್ಯ ಸಮುದಾಯದವರ ಅಭಿವೃದ್ಧಿಗಾಗಿ ದೇವನಿಧಿಯ ಉಪಯೋಗವಾಗುತ್ತಿದೆ. ಎಷ್ಟೋ ದೇವಸ್ಥಾನಗಳು ಶಿಥಿಲಾವಸ್ಥೆಯಲ್ಲಿವೆ.
ಹಿಂದೂ ಜನಜಾಗೃತಿ ಸಮಿತಿ ಕಳೆದ ಅನೇಕ ವರ್ಷದಿಂದ ದೇವಸ್ಥಾನಗಳನ್ನು ಸರಕಾರದ ಕಪಿಮುಷ್ಟಿಯಿಂದ ಹೊರತರಲು ಹೋರಾಟ ಮಾಡುತ್ತಿದೆ. ಸರಕಾರದ ಈ ನಿರ್ಧಾರದಿಂದ ದೇವಸ್ಥಾನದ ಹಣ ದೇವಸ್ಥಾನದ ಅಭಿವೃದ್ಧಿ ಮತ್ತು ಹಿಂದೂ ಧರ್ಮದ ಪ್ರಚಾರಕ್ಕೆ ಉಪಯೋಗವಾಗಲಿದೆ ಎಂಬ ವಿಶ್ವಾಸ ನಮ್ಮಲ್ಲಿದೆ.
ಈ ಪ್ರಕ್ರಿಯೆಯಲ್ಲಿ ಹಿಂದೂ ಸಂತರು, ಮಠಾಧೀಶರು ಮತ್ತು ಹಿಂದೂ ಸಂಘಟನೆಗಳನ್ನು ಸಹಭಾಗಿಗಳನ್ನಾಗಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸುವುದಾಗಿ ಮೋಹನ ಗೌಡ ತಿಳಿಸಿದ್ದಾರೆ