ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19
ಪೂರ್ವಜರ ಸಸ್ಯ ಪಾಲನೆಯಿಂದ ನಾವು ಸ್ವಸ್ಥ
ಉಡುಪಿ: ನಮ್ಮ ಪೂರ್ವಜರು ಮರಗಳನ್ನು ನೆಟ್ಟು, ಪೋಷಿಸಿದ ಕಾರಣದಿಂದಾಗಿ ಇಂದು ನಾವು ಅಸ್ತಿತ್ವದಲ್ಲಿದ್ದು, ಸ್ವಸ್ಥ ಜೀವನ ನಡೆಸುತ್ತಿದ್ದೇವೆ ಎಂದು ಪರಿಸರ ಪ್ರೇಮಿ ಮತ್ತು ರೋಟರಿ ಉಡುಪಿ ರಾಯಲ್ ಕ್ಲಬ್ ಅಧ್ಯಕ್ಷ ಡಾ| ಬಾಲಕೃಷ್ಣ ಮದ್ದೋಡಿ ಹೇಳಿದರು.
ಜೆಸಿಐ ಕಲ್ಯಾಣಪುರ, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಶನ್ ಉಡುಪಿ ವಲಯ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಸಂಯುಕ್ತವಾಗಿ ನಿಟ್ಟೂರು ಶಾಲಾ ಆವರಣದಲ್ಲಿ ಆಯೋಜಿಸಿದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಕೃತಿಯಲ್ಲಿ ನಾವು ಕಾಣುವ ಜೀವನ ಚಕ್ರವನ್ನು ನಮ್ಮ ಪೂರ್ವಜರು ಉಳಿಸಿ ಬೆಳೆಸಿದ್ದಾರೆ. ಅದನ್ನು ಮತ್ತಷ್ಟು ಮುಂದುವರಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮ ಜವಾಬ್ದಾರಿ ಎಂದರು.
ಜೆಸಿಐ ಅಧ್ಯಕ್ಷೆ ಜಯಶ್ರೀ ಮಿತ್ರ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಜಿಲ್ಲಾ ಯೋಜನೆಯಾದ ನಾಟಿ ಮಹತ್ವದ ಕುರಿತು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಡುಪಿ ಮತ್ತು ಪರಿಸರದಲ್ಲಿ ಸಾಕಷ್ಟು ಪರಿಸರ ಸಂಬಂಧಿ ಯೋಜನೆ ರೂಪಿಸಿ, ಪರಿಸರ ಸಂರಕ್ಷಣೆಯಲ್ಲಿ ಸಹಕರಿಸಿದ ನಿತ್ಯಾನಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ವಲಯ ಸಂಯೋಜಕಿ ಪೂಣರ್ಿಮಾ ಜನಾರ್ದನ ಕೊಡವೂರು, ರೋಟರಿ ಸದಸ್ಯೆ ಲಕ್ಷಿ ಶೆಟ್ಟಿ, ಜೆಸಿಐ ಕಲ್ಯಾಣಪುರದ ಸ್ಥಾಪಕಾಧ್ಯಕ್ಷ ಜಗದೀಶ್ ಕೆಮ್ಮಣ್ಣು, ಪೂರ್ವಾಧ್ಯಕ್ಷ ಅರುಣ್ ಕುಮಾರ್, ಕಾರ್ಯದಶರ್ಿ ಅನುಸೂಯ, ಪದ್ಮನಾಭ, ಗುಣವರ್ಮ, ಗಣಪತಿ, ಛಾಯಾಗ್ರಾಹಕರಾದ ಪ್ರವೀಣ್ ಕೊರೆಯ, ಸುರಭಿ ಸುಧೀರ್ ಶೆಟ್ಟಿ, ದಿವಾಕರ ಹಿರಿಯಡ್ಕ, ಮಿತ್ರ ಕುಮಾರ್, ಪ್ರವೀಣ್ ಹೂಡೆ,ನಾರಾಯಣ್ ಜತ್ತನ್, ಸಂತೋಷ್ ಕೊರಂಗ್ರಪಾಡಿ, ಪ್ರಕಾಶ್ ಕೊಡಂಕೂರು, ಸುಕೇಶ್ ಅಮೀನ್, ಸಂದೀಪ್ ಕಾಮತ್, ಎಂ. ಎಸ್. ಮಂಜು, ಸತೀಶ್ ಶೇರಿಗಾರ್, ಸುಶಾಂತ್ ಕೆರೆಮಠ, ವಸಂತ ಕುಮಾರ್, ಸಹ ಶಿಕ್ಷಕಿ ಸೀಮಾ ಸಂಯೋಜಿಸಿದರು.
ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಶನ್ ಉಡುಪಿ ವಲಯಾಧ್ಯಕ್ಷ, ರೋಟರಿ ಸದಸ್ಯ ಜನಾರ್ದನ ಕೊಡವೂರು ವಂದಿಸಿದರು.