Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಸಾಧಕರಿಗೆ ಗೌರವಾರ್ಪಣೆ

ಸಾಧಕರಿಗೆ ಗೌರವಾರ್ಪಣೆ

ಸಾಧಕರಿಗೆ ಗೌರವಾರ್ಪಣೆ

(ಸುದ್ದಿಕಿರಣ ವರದಿ)
ಮಣಿಪಾಲ: ಇಲ್ಲಿನ ಮಾಧವ ಪೈ ಸ್ಮಾರಕ ಕಾಲೇಜು ವಾರ್ಷಿಕ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಈಚೆಗೆ ಕಾಲೇಜು ಸಭಾಭವನದಲ್ಲಿ ನಡೆಯಿತು.

ಕಾಲೇಜಿನ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪ್ರೊ. ದಯಾನಂದ ಶೆಟ್ಟಿ ಹಾಗೂ ಮಂಗಳೂರು ವಿ.ವಿ. ಬಿಸಿಎ ವಿಭಾಗದಲ್ಲಿ 8ನೇ ರಾಂಕ್ ಪಡೆದ ಶೃದ್ಧಾ ಎಸ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ರಾಧಿಕಾ ಪೈ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಟಿ. ಸುಧಾಕರ ಪೈ ಶುಭ ಹಾರೈಸಿದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ರಾಘವೇಂದ್ರ ಪ್ರಭು ಕರ್ವಾಲು, ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷೆ ಗುಣಸರಸ್ವತಿ ಇದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!