Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಸಾಧಕರಿಗೆ ಸನ್ಮಾನ

ಸಾಧಕರಿಗೆ ಸನ್ಮಾನ

ಉಡುಪಿ: ಪರ್ಯಾಯ ಅದಮಾರು ಶ್ರೀಕೃಷ್ಣಮಠ ಆಶ್ರಯದಲ್ಲಿ ನಡೆದ ಸಪ್ತೋತ್ಸವ ಅಂಗವಾಗಿ ಗುರುವಾರ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಅದಮಾರು ಹಿರಿಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪಯರ್ಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಉದ್ಯಮಿ ಪುರುಷೋತ್ತಮ ಶೆಟ್ಟಿ ಅಭ್ಯಾಗತರಾಗಿದ್ದರು.

ಈ ಸಂದರ್ಭದಲ್ಲಿ ವೇದಪಾರಂಗತ ವಿದ್ವಾಂಸ ಕೊಯಮತ್ತೂರು ವಿದ್ವಾನ್ ಸತ್ಯನಾರಾಯಣಾಚಾರ್ಯ ಅವರನ್ನು ಶ್ರೀಪಾದದ್ವಯರು ಸನ್ಮಾನಿಸಿದರು.

ಪ್ರವಚನ
ಅದಕ್ಕೂ ಮುನ್ನ ನಡೆದ ಭಾಗವತ ಸಪ್ತಾಹದಲ್ಲಿ ಕೃಷ್ಣ ಸಮೀಕ್ಷಾ ಪ್ರವಚನವನ್ನು ವಿದ್ವಾನ್ ರಾಮನಾಥ ಆಚಾರ್ಯ ನಡೆಸಿದರು.

ವೇಣುವಾದನ
ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರು ವಿದ್ವಾನ್ ಎಚ್. ಎಸ್. ವೇಣುಗೋಪಾಲ್ ಮತ್ತು ಬಳಗದವರಿಂದ ಪಂಚ ವೇಣುವಾದನ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!