Thursday, December 2, 2021
Home ಸಮಾಚಾರ ಅಪರಾಧ ಬಂಟ್ವಾಳ: ಸಾಮೂಹಿಕ ಅತ್ಯಾಚಾರ; ಆರೋಪಿಗಳ ದಸ್ತಗಿರಿ

ಬಂಟ್ವಾಳ: ಸಾಮೂಹಿಕ ಅತ್ಯಾಚಾರ; ಆರೋಪಿಗಳ ದಸ್ತಗಿರಿ

ಬಂಟ್ವಾಳ: ಸಾಮೂಹಿಕ ಅತ್ಯಾಚಾರ; ಆರೋಪಿಗಳ ದಸ್ತಗಿರಿ
(ಸುದ್ದಿಕಿರಣ ವರದಿ)

ಬಂಟ್ವಾಳ: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಇಲ್ಲಿಗೆ ಸಮೀಪದ ಅಮ್ಟಾಡಿಯಲ್ಲಿ ನಡೆದಿದೆ.

ಬಾಲಕಿ ತನ್ನ ಮನೆಯಿಂದ ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಬಂದ ದುರುಳರು ಅಕೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾರೆ. ಈ ಕುರಿತು ಬಾಲಕಿ ದೂರು ನೀಡುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾಳೆ.

ಇದೀಗ ಬಾಲಕಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಚಾಕಲೇಟ್ ನೀಡಿದ ದುರುಳರು
ಅಪ್ರಾಪ್ತ ಬಾಲಕಿಯನ್ನು ಚಾಕಲೇಟ್ ನೀಡಿ ದುರುಳರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯನ್ನು ಬಂಟ್ವಾಳದ ಟೋಲ್ ಗೇಟ್ ಬಳಿ ಬಿಟ್ಟು ಹೋಗಿದ್ದು, ಈ ಈ ದೃಶ್ಯಾವಳಿಗಳು ಟೋಲ್ ಗೇಟ್ ಬಳಿಯ ಸಿಸಿಟಿವಿ ಯಲ್ಲಿ ದಾಖಲಾಗಿದೆ.

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ಬೇಸರ ತಂದಿದೆ
ಈ ದುರ್ಘಟನೆ ಬೇಸರ ತಂದಿದೆ. ಇದು ನಡೆಯಬಾರದಿತ್ತು. ಅತ್ಯಾಚಾರಿಗಳ ಬಂಧನವಾಗಿದೆ. ಕರ್ನಾಟಕ ಪೊಲೀಸರು ತಕ್ಷಣ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಸಂಭವಿಸಬಾರದು. ಸರಕಾರ ಕಟ್ಟುನಿಟ್ಟಿನ ಕ್ರಮ ಸರಕಾರ ಕೈಗೊಳ್ಳಬೇಕು ಎಂಬ ಸಲಹೆಯನ್ನು ಕರ್ನಾಟಕ ಸರಕಾರಕ್ಕೆ ನೀಡಿದ್ದೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!