ಉಡುಪಿ: ಇಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ)ಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಅಧೀಕ್ಷಕರು, ಕಾರ್ಯನಿರ್ವಾಹಕದೊಂದಿಗೆ ಸಾರಿಗೆ ಸಕಾಲ ಸಪ್ತಾಹ ಆಚರಿಸಲಾಯಿತು.
ಸಾರಿಗೆ ಇಲಾಖೆ ಸೇವೆಗಳಾದ ಕಲಿಕೆ ಲೈಸೆನ್ಸ್, ಚಾಲನೆ ಲೈಸೆನ್ಸ್, ವಾಹನಗಳ ನೋಂದಣಿ, ದ್ವಿಪ್ರತಿ ಲೈಸೆನ್ಸ್, ನೋಂದಣಿ ಪ್ರಮಾಣಪತ್ರದ ದ್ವಿಪ್ರತಿ, ಕಲಿಕಾ ಲೈಸೆನ್ಸ್ ನಲ್ಲಿ ವಿಳಾಸ ಬದಲಾವಣೆ, ಚಾಲನೆ ತರಬೇತಿ ಶಾಲೆಯ ಪರವಾನಿಗೆ ನವೀಕರಣ ಸೇರಿ ಒಟ್ಟು 26 ಸೇವೆ ಸಕಾಲದಡಿ ಬರಲಿದ್ದು, ಸಾರ್ವಜನಿಕರು ಅರ್ಜಿಗಳನ್ನು ಸಕಾಲ ಅಡಿಯಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಸಕಾಲದಡಿ ಸ್ವೀಕೃತವಾದ ಅರ್ಜಿಗಳಿಗೆ 15 ಅಂಕಿಯ ಜಿ.ಎಸ್.ಇ ಸಂಖ್ಯೆಯನ್ನು ತಪ್ಪದೆ ನೀಡಬೇಕು. ಜೊತೆಗೆ ಅರ್ಜಿಯ ಪ್ರತಿಯೊಂದು ಹಂತದಲ್ಲಿಯೂ ಅರ್ಜಿ ವಿಲೇವಾರಿಗೆ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗುತ್ತದೆ.
ನಿಗದಿತ ಕಾಲಮಿತಿಯೊಳಗೆ ಅರ್ಜಿಗಳನ್ನು ಕಾನೂನಿನ ಪರಿಮಿತಿಯಲ್ಲಿ ಇತ್ಯರ್ಥಗೊಳಿಸಲಾಗುತ್ತದೆ. ಸಾರ್ವಜನಿಕರು ಸಕಾಲ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಗಂಗಾಧರ್ ತಿಳಿಸಿದ್ದಾರೆ