ಸುದ್ದಿಕಿರಣ ವರದಿ
ಸೋಮವಾರ, ಜುಲೈ 25
ಗಾಳಕ್ಕೆ ಸಿಕ್ಕಿತು ಭಾರೀ ಗಾತ್ರದ ಮೀನು
ಮಲ್ಪೆ: ವೃತ್ತಿಯಲ್ಲಿ ಕೇಬಲ್ ಆಪರೇಟರ್ ಆಗಿರುವ ಉದ್ಯಾವರ ನಾಗೇಶ್ ಎಂಬವರು ಹವ್ಯಾಸಕ್ಕಾಗಿ ಸೋಮವಾರ ಮಲ್ಪೆ ಕಡಲಿನಲ್ಲಿ ಗಾಳ ಹಾಕಿದಾಗ ಸಾವಿರಾರು ರೂ. ಬೆಲೆ ಬಾಳುವ ಮೀನು ಲಭಿಸಿದೆ!
ನಾಗೇಶ್ ಬೀಸಿದ ಗಾಳಕ್ಕೆ 15 ಕೆ.ಜಿ ತೂಕದ ವಿಶಿಷ್ಟ ಕೊಕ್ಕರ್ ಮೀನು ಸಿಕ್ಕಿದೆ. ಜೊತೆಗೆ 25 ಕೆಜಿ ತೂಕದ ಮೂರು ಮೀನು ಲಭಿಸಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ