Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಶ್ರೀಸುತೀರ್ಥಭೂಷಣ ಪ್ರಶಸ್ತಿ ಪ್ರದಾನ

ಶ್ರೀಸುತೀರ್ಥಭೂಷಣ ಪ್ರಶಸ್ತಿ ಪ್ರದಾನ

ಸುದ್ದಿಕಿರಣ ವರದಿ
ಮಂಗಳವಾರ, ಮೇ 17

ಶ್ರೀಸುತೀರ್ಥಭೂಷಣ ಪ್ರಶಸ್ತಿ ಪ್ರದಾನ
ಉಡುಪಿ: ಪುತ್ತಿಗೆ ಮಠದ ಶ್ರೀ ವಾದಿರಾಜ ಸಂಶೋಧನ ಪ್ರತಿಷ್ಠಾನ ನಿರ್ದೇಶಕ ಡಾ| ಬಿ. ಗೋಪಾಲಾಚಾರ್ಯ ನಡೆಸಿರುವ ತಾಡವಾಲೆ ಗ್ರಂಥಗಳ ಸಂರಕ್ಷಣೆ, ಮಧ್ವಾಚಾರ್ಯರು ಸಂಚರಿಸಿದ ಸ್ಥಳಗಳ ದಾಖಲಾತಿ, ಶ್ರೀಮಧ್ವವಿಜಯ ಮಹಾಕಾವ್ಯ ಆಧರಿಸಿದ ಪಡೆದಿರುವ ಪಿಎಚ್.ಡಿ ಇತ್ಯಾದಿ ಸಾಧನೆಗಳನ್ನು ಗುರುತಿಸಿ ಭಂಡಾರಕೇರಿ ಮಠಾಧಿಪತಿ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಈಚೆಗೆ ನಡೆದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಆರಾಧನೆ ಹಾಗೂ ಶ್ರೀ ನರಸಿಂಹ ಜಯಂತಿ ಅಂಗವಾಗಿ ನಡೆದ ವಿದ್ವತ್ಸಭೆಯಲ್ಲಿ ಶ್ರೀ ಸುತೀರ್ಥಭೂಷಣ ಪ್ರಶಸ್ತಿಯೊಂದಿಗೆ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಖ್ಯಾತ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ತಿರುಮಲ ತಿರುಪತಿ ದೇವಸ್ಥಾನಗಳ ದಾಸ ಸಾಹಿತ್ಯ ಪ್ರಾಜೆಕ್ಟಿನ ವಿಶೇಷ ಅಧಿಕಾರಿ ಆನಂದತೀರ್ಥಾಚಾರ್ ಪಗಡಾಲ್, ಹಿರಿಯ ವಿದ್ವಾಂಸ ಮಳಗಿ ರಾಮಾಚಾರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!