Thursday, December 2, 2021
Home ಸಮಾಚಾರ ಅಪರಾಧ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿದಾತನ ದಸ್ತಗಿರಿ

ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿದಾತನ ದಸ್ತಗಿರಿ

ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿದಾತನ ದಸ್ತಗಿರಿ
(ಸುದ್ದಿಕಿರಣ ವರದಿ)

ಮಣಿಪಾಲ: ಸ್ನೇಹಿತೆ, ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಸ್ನೇಹಿತನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದೆಹಲಿ ಮೂಲದ ಆರ್ಯನ್ ಚಂದಾವನಿ ಎಂದು ಗುರುತಿಸಲಾಗಿದೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕಳೆದ ಅ. 16ರಂದು ಇಂದ್ರಾಳಿಯ ಫ್ಲ್ಯಾಟ್ ವೊಂದರಲ್ಲಿ ಕುಡಿದ ನಶೆಯಲ್ಲಿ ಗೆಳತಿಯ ಮೇಲೆ ಆರ್ಯನ್ ಚಂದಾವನಿ ಅತ್ಯಾಚಾರ ನಡೆಸಿರುವುದಾಗಿ ಉಡುಪಿ ಮಹಿಳಾ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಳು.

ಆಕೆ ನೀಡಿದ ದೂರಿನಂತೆ ಮಣಿಪಾಲ ಪೋಲಿಸರು ಆರ್ಯನ್ ಚಂದಾವನಿಯನ್ನು ಬಂಧಿಸಿದ್ದು, ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!