Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಸ್ಮತಿ ದಿನ ಆಚರಣೆ

ಸ್ಮತಿ ದಿನ ಆಚರಣೆ

ಮಣಿಪಾಲ: ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ (ಬಿವಿಟಿ)ಯಲ್ಲಿ ಡಾ. ಟಿ.ಎಂ.ಎ. ಪೈ ಮತ್ತು ಟಿ.ಎ.ಪೈ ಸ್ಮೃತಿದಿನವನ್ನು ಸರಳವಾಗಿ ಆಚರಿಸಲಾಯಿತು.

ಬಿವಿಟಿ ಹಿರಿಯ ಸಲಹೆಗಾರ ಶ್ರೀಕಾಂತ ಹೊಳ್ಳ ಪೈಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಡಾ. ಟಿ.ಎಂ.ಎ. ಪೈ ಮತ್ತು ಟಿ.ಎ.ಪೈ ಸಮಾಜದ ಎಲ್ಲ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಅಭಿವೃದ್ಧಿಗೆ ಬೇಕಾದ ಅಪೂರ್ವ ಮಾದರಿ ರೂಪಿಸಿದ್ದರು. ಆ ಇಬ್ಬರೂ ಮಹನೀಯರ ಜೀವನ ಮತ್ತು ಸಾಧನೆ ಸ್ಮರಿಸುತ್ತಾ ಮುಂದಿನ ಜನಾಂಗ ಅವರಿಂದ ಸ್ಪೂರ್ತಿ ಪಡೆದು ದೇಶ ಕಟ್ಟುವ ಕಾರ್ಯ ನಡೆಸಲಿ ಎಂದು ಆಶಿಸಿದರು.

ಬಿವಿಟಿ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!