Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜನಸೇವೆ ಜೊತೆಗೆ ಸ್ವಯಂ ಕಾಳಜಿ ಅಗತ್ಯ

ಜನಸೇವೆ ಜೊತೆಗೆ ಸ್ವಯಂ ಕಾಳಜಿ ಅಗತ್ಯ

ಉಡುಪಿ: ಕೋವಿಡ್ ವಾರಿಯರ್ಸ್ ಹಾಗೂ ಕೋವಿಡ್ 19 ಹೆಲ್ಪ್ ಡೆಸ್ಕ್ ಸೇವಾನಿರತ ಕಾರ್ಯಕರ್ತರು ಜನಸೇವೆ ಜೊತೆಗೆ ಸ್ವಯಂ ಆರೋಗ್ಯ ಪಾಲನೆಯ ಕಾಳಜಿ ವಹಿಸುವುದು ಅತೀ ಅಗತ್ಯ ಎಂದು ಅಂಬಲಪಾಡಿ ದೇವಸ್ಥಾನ ಕ್ಷೇತ್ರಾಧಿಕಾರಿ ಡಾ. ನಿ. ಬೀ. ವಿಜಯ ಬಲ್ಲಾಳ್ ಹೇಳಿದರು.

ಡಾ. ಬಲ್ಲಾಳ್ ನೇತೃತ್ವದಲ್ಲಿ ಉಡುಪಿ ನಗರ ಆರಕ್ಷಕ ಠಾಣೆ ಮಾರ್ಗದರ್ಶನದಲ್ಲಿ ಯುವಕ ಮಂಡಲ ಅಂಬಲಪಾಡಿ ಮತ್ತು ಸ್ಥಳೀಯ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಯುವಕ ಮಂಡಲ ಕಚೇರಿಯಲ್ಲಿ ಕಾರ್ಯಾಚರಿಸುತ್ತಿರುವ ಕೋವಿಡ್- 19 ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ಪರಿಕರ ಹಸ್ತಾಂತರಿಸಿ, ದಾನಿಗಳ ನೆರವಿನ ಕಿಟ್ ವಿತರಿಸಿ ಮಾತನಾಡಿದರು.

ಸ್ವಯಂ ಜಾಗೃತಿಯೇ ಕೋವಿಡ್ ಸೋಂಕು ತಡೆಗಟ್ಟುವ ಸುಲಭ ವಿಧಾನ. ಮಾಸ್ಕ್ ಧರಿಸುವ ಜೊತೆಗೆ ವ್ಯಕ್ತಿಗತ ಅಂತರ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಸರ್ಕಾರದ ನಿಯಮ ಪಾಲಿಸಿಕೊಂಡು ಅಶಕ್ತರಿಗೆ ಸಹಾಯ ಮಾಡುವುದು ಇಂದಿನ ಅಗತ್ಯ ಎಂದರು.

ನೆರವಿಗೆ ಬದ್ಧ
ಕಿದಿಯೂರು ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಕೆ. ಉದಯ ಕುಮಾರ್ ಶೆಟ್ಟಿ, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಜನಸೇವೆಗೈಯುವುದೇ ಒಂದು ಸುಯೋಗ. ಕಳೆದ ವರ್ಷವೂ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಕಾರ್ಮಿಕರು ಮತ್ತು ಅಶಕ್ತರಿಗೆ ಟ್ರಸ್ಟ್ ಮೂಲಕ ಗರಿಷ್ಠ ಸಹಾಯ ನೀಡಿದ್ದು, ಈ ಬಾರಿಯೂ ಅಗತ್ಯ ಫಲಾನುಭವಿಗಳನ್ನು ಗುರುತಿಸಿದಲ್ಲಿ ಟ್ರಸ್ಟ್ ಮೂಲಕ ಆಹಾರ ಧಾನ್ಯ ಕಿಟ್ ವಿತರಿಸಲು ಬದ್ಧ ಎಂದರು.

ಕೋವಿಡ್ 19 ಹೆಲ್ಪ್ ಡೆಸ್ಕ್ ಅಂಬಲಪಾಡಿ ಸೇವಾ ಕಾರ್ಯ ಮಾದರಿ ಎಂದು ಪ್ರಶಂಸಿಸಿದರು.

ಅಂಬಲಪಾಡಿ ದೇವಸ್ಥಾನ ಹಾಗೂ ಕೆ. ಉದಯ ಕುಮಾರ್ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೋವಿಡ್ 19 ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ನೀಡಿದ ಪಲ್ಸ್ ಆಕ್ಸಿಮೀಟರ್, ಸ್ಯಾನಿಟೈಸರ್, ಮಾಸ್ಕ್, ಥರ್ಮಲ್ ಸ್ಕ್ಯಾನರ್, ಗ್ಲೋವ್ಸ್, ಫೇಸ್ ಶೀಲ್ಡ್, ಫ್ಲೋರ್ ಸ್ಯಾನಿಟೈಸರ್ ಇತ್ಯಾದಿ ಕೋವಿಡ್ ಮುಂಜಾಗ್ರತಾ ಸಂಬಂಧಿತ ಪರಿಕರಗಳನ್ನು ಹಸ್ತಾಂತರಿಸಲಾಯಿತು.

ಜೊತೆಗೆ ರಾಜೇಂದ್ರ ಪಂದುಬೆಟ್ಟು, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ಪಲ್ಸ್ ಅಕ್ಸಿಮೀಟರ್, ಅಂಡಾರು ದೇವಿಪ್ರಸಾದ್ ಶೆಟ್ಟಿ ಮಾಸ್ಕ್, ಪ್ರಶಾಂತ್ ಅಂಬಲಪಾಡಿ ಸ್ಯಾನಿಟೈಸಿಂಗ್ ಕಿಟ್, ಜತ್ತನ್ ಪದ್ಮನಾಭ ಅಣ್ಣು ಮತ್ತು ಹೆಲ್ಪ್ ಲೈನ್ ಉಡುಪಿ ವತಿಯಿಂದ ನೀಡಲಾದ ಆಹಾರ ಧಾನ್ಯಗಳ ಕಿಟ್ ಕೊಡುಗೆಗಳನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಆರಕ್ಷಕ ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಹೆಲ್ಪ್ ಡೆಸ್ಕ್ ಕೇಂದ್ರಕ್ಕೆ ಭೇಟಿ ನೀಡಿದರು.

ಯುವಕ ಮಂಡಲ ಅಂಬಲಪಾಡಿ ಅಧ್ಯಕ್ಷ ಹರೀಶ್ ಪಾಲನ್, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಸಾಮಾಜಿಕ ಮುಖಂಡ ಅಂಡಾರು ದೇವಿಪ್ರಸಾದ್ ಶೆಟ್ಟಿ, ಉಡುಪಿ ನಗರ ಆರಕ್ಷಕ ಠಾಣೆ ಸಿಬ್ಬಂದಿಗಳಾದ ಮಹಾಲಿಂಗ ಪಾತ್ರೋಟ್ ಮತ್ತು ಚೇತನ್ ಎಸ್., ಕೋವಿಡ್ 19 ಹೆಲ್ಪ್ ಡೆಸ್ಕ್ ತಂಡದ ಸೇವಾ ಪ್ರಮುಖರಾದ ಕೀರ್ತಿ ಶೆಟ್ಟಿ, ಯೋಗೀಶ್ ಶೆಟ್ಟಿ, ಶಿವಕುಮಾರ್ ಅಂಬಲಪಾಡಿ, ವಾಮನ್ ಪಾಲನ್, ರಾಜೇಂದ್ರ ಪಂದುಬೆಟ್ಟು, ಹರೀಶ್ ಆಚಾರ್ಯ, ಅಜಿತ್ ಕಪ್ಪೆಟ್ಟು, ಪ್ರಶಾಂತ್ ಕೆ. ಎಸ್., ಕೃಷ್ಣ ಅಂಬಲಪಾಡಿ, ಜಗದೀಶ್ ಆಚಾರ್ಯ, ಪ್ರವೀಣ್ ಉಪಾಧ್ಯಾಯ, ಭರತ್ ರಾಜ್ ಕೆ.ಎನ್., ರಾಜೇಶ್ ಸುವರ್ಣ, ಲಕ್ಷ್ಮಣ ಪೂಜಾರಿ, ಗಣೇಶ್ ಶೆಣೈ, ಹರೀಶ್, ನಿಶಾಂತ್, ಮೇಘ, ಮಹೇಂದ್ರ ಕೋಟ್ಯಾನ್, ವಿನೋದ್ ಪೂಜಾರಿ, ಸುನಿಲ್ ಕುಮಾರ್, ಶ್ರೀಧರ, ಸುಜಿತ್ ಕಪ್ಪೆಟ್ಟು, ಸತೀಶ್ ಭಂಡಾರಿ, ರಾಮರಾಜ್ ಕಿದಿಯೂರು, ಗಿರೀಶ್ ಅಮೀನ್ ಕಿದಿಯೂರು, ಸುಂದರ ಪೂಜಾರಿ, ಶಶಿಧರ ಸುವರ್ಣ, ನವೀನ್ ಕಿದಿಯೂರು, ಆಶಾ ಕಾರ್ಯಕರ್ತೆಯರಾದ ಸರಸ್ವತಿ ಕೆ. ಶ್ರೀಯಾನ್, ಗಾಯತ್ರಿ ಮತ್ತು ನಿಶಾ ಮುಂತಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!