Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪೊಲೀಸರ ಮೇಲಿನ ಹಲ್ಲೆ ಸಹಿಸಲು ಸಾಧ್ಯವಿಲ್ಲ

ಪೊಲೀಸರ ಮೇಲಿನ ಹಲ್ಲೆ ಸಹಿಸಲು ಸಾಧ್ಯವಿಲ್ಲ

ಪೊಲೀಸರ ಮೇಲಿನ ಹಲ್ಲೆ ಸಹಿಸಲು ಸಾಧ್ಯವಿಲ್ಲ

ಉಡುಪಿ, ಡಿ. 15 (ಸುದ್ದಿಕಿರಣ ವರದಿ): ಉಪ್ಪಿನಂಗಡಿಯಲ್ಲಿ ಹಿಂದೂಗಳು ಮಾಡುತ್ತಿರುವ ಮೀನು ವ್ಯವಹಾರ ತಡೆಯಲು ಮತೀಯ ಸಂಘಟನೆಯವರು ಮಾರಾಕಾಯುಧಗಳಿಂದ ದಾಳಿ ಮಾಡಿರುವುದು ಖಂಡನೀಯ. ಆ ನಿಮಿತ್ತ ಪೊಲೀಸರ ದಿಟ್ಟ ಕ್ರಮ ಶ್ಲಾಘನೀಯ.

ಆದರೆ, ಇದೇ ವಿಷಯದಲ್ಲಿ ಪೊಲೀಸರ ಮೇಲೆ ನಡೆದ ಹಲ್ಲೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದು ಉಡುಪಿ ಜಿಲ್ಲಾ ರಾಮ್ ಸೇನಾ ಅಧ್ಯಕ್ಷ ಜಯರಾಂ ಅಂಬೆಕಲ್ಲು ಎಚ್ಚರಿಸಿದ್ದಾರೆ.

ಧರ್ಮಾತೀತ, ಜಾತ್ಯತೀತ, ರಾಜಕೀಯೇತರವಾಗಿ ನಮ್ಮನ್ನು ರಕ್ಷಿಸುತ್ತಿರುವ ಪೊಲೀಸರ ಮೇಲೆ ಹಲ್ಲೆ ಮಾಡಿದರೆ ರಾಮ್ ಸೇನೆ ಯಾವುದೇ ಕಾರಣಕ್ಕೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಸದಾ ನಮ್ಮ ರಕ್ಷಕರೊಂದಿಗೆ ನಾವು ಇರುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮತಾಂಧ ಶಕ್ತಿಗಳು ಕರೆ ನೀಡಿದಂತೆ ಮಂಗಳೂರು ಪೋಲಿಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವುದು ಬಿಡಿ, ಪಂಪ್ ವೆಲ್ ಸರ್ಕಲ್ ನಿಂದ ಮುಂದೆ ಹೋಗಲು ರಾಮ್ ಸೇನಾ ಸಂಘಟನೆಯ ಉಡುಪಿ ಹಾಗೂ ದ.ಕ ಜಿಲ್ಲಾ ಕಾರ್ಯಕರ್ತರು ಬಿಡುವುದಿಲ್ಲ ಎಂದು ಜಯರಾಂ ಅಂಬೆಕಲ್ಲು ತಾಕೀತು ಮಾಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!