ಹಾರ ಬೇಡ ಪುಸ್ತಕ ಕೊಡಿ
(ಸುದ್ದಿಕಿರಣ ವರದಿ)
ಉಡುಪಿ: ನನ್ನ ಅಭಿನಂದನ ಸಮಾರಂಭಗಳಲ್ಲಿ ಹಾರ ಹೂಗುಚ್ಚ ಬೇಡ. ಬದಲಿಗೆ ಪುಸ್ತಕ ನೀಡಿ.
ಇದು ಸಂಪುಟ ದರ್ಜೆಯ ಸಚಿವ ವಿ. ಸುನಿಲ್ ಕುಮಾರ್ ಕಳಕಳಿಯ ಮನವಿ.
ಸಚಿವರಾದ ಸಂದರ್ಭದಲ್ಲಿ ವಿವಿಧೆಡೆ ಸನ್ಮಾನ, ಅಭಿನಂದನೆ ಸಾಮಾನ್ಯ. ಈ ಸಂದರ್ಭದಲ್ಲಿ ರಾಶಿ ರಾಶಿ ಹಾರ, ಹೂಗುಚ್ಛ, ಸ್ಮರಣಿಕೆ ಸಾಮಾನ್ಯ. ಕೆಲವೊಮ್ಮೆ ಅವೂ ತ್ಯಾಜ್ಯವಾಗುವ ಸಾಧ್ಯತೆ ಇದೆ.
ಇದನ್ನು ಮನಗಂಡ ಸಚಿವ ಸುನಿಲ್ ತನ್ನನ್ನು ಅಭಿನಂದಿಸುವವರು ಹೂಹಾರ ಬೇಡ. ಕೊಡಲೇ ಬೇಕೆಂದಿದ್ದರೆ ಕನ್ನಡ ಪುಸ್ತಕ ಕೊಡಿ. ಅವುಗಳನ್ನು ಕಾರ್ಕಳ ಗ್ರಂಥಾಲಯಕ್ಕೆಡು ನೀಡುವುದಾಗಿ ತಿಳಿಸಿದ್ದಾರೆ.
ಆ ಮೂಲಕ ಪುಸ್ತಕ ಪ್ರೀತಿಯ, ಓದಿನ ಹವ್ಯಾಸ ವೃದ್ಧಿಯ ಸಂದೇಶ ನೀಡಿದ್ದಾರೆ.