Wednesday, August 10, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಹಿಂದೂ ಧರ್ಮವೇ ಶ್ರೇಷ್ಠ

ಹಿಂದೂ ಧರ್ಮವೇ ಶ್ರೇಷ್ಠ

ಹಿಂದೂ ಧರ್ಮವೇ ಶ್ರೇಷ್ಠ

ಉಡುಪಿ, ಡಿ. 8 (ಸುದ್ದಿಕಿರಣ ವರದಿ): ಹಿಂದೂ ಧರ್ಮದಲ್ಲಿ ಮಾತ್ರ ಪುನರ್ಜನ್ಮದ ಕಲ್ಪನೆ ಇದೆ. ಆದ್ದರಿಂದ ಈ ಜನ್ಮದಲ್ಲಿ ತಪ್ಪು ಮಾಡಿದರೂ ಮತ್ತೊಂದು ಜನ್ಮದಲ್ಲಿ ಸರಿಪಡಿಸಿಕೊಳ್ಳಲು ಅವಕಾಶವಿದೆ.

ಬೇರೆ ಧರ್ಮಗಳಲ್ಲಿ ಅದು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಹಿಂದೂ ಧರ್ಮವೇ ಶ್ರೇಷ್ಠ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.

ಅದಮಾರು ನರಹರಿತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಕಾರ್ಯಕ್ರಮದ ನಾಲ್ಕನೇ ದಿನವಾದ ಬುಧವಾರ ಮಾತನಾಡಿದರು

ಚಿಂತನೆ ಒಂದೇ
ಸಾನ್ನಿಧ್ಯ ವಹಿಸಿದ್ದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ, ನಮ್ಮ ಅನುಷ್ಠಾನದ ಪದ್ಧತಿಯಲ್ಲಿ ವ್ಯತ್ಯಾಸವಿದ್ದರೂ ಚಿಂತನೆಯಲ್ಲಿ ಸಾಮ್ಯತೆ ಇದೆ.

ಆದ್ದರಿಂದಲೇ ನಮ್ಮನ್ನು ಪರ್ಯಾಯ ಶ್ರೀಪಾದರು ಶ್ರೀಮಠಕ್ಕೆ ಕರೆಸಿರುವುದು. ಉಭಯತ್ರರೂ ಧನ್ಯರಾದೆವು ಎಂದರು.

ಉಪನ್ಯಾಸ
ಅಭ್ಯಾಗತರಾಗಿದ್ದ ಕೇಂದ್ರ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಪ್ರಾಚೀನ ಮತ್ತು ಜೀವಂತವಿರುವ ಹಿಂದೂ ನಾಗರಿಕತೆಯ ಭಾಗವಾಗಿರಲು ಹೆಮ್ಮೆ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸನ್ಮಾನ
ಈ ಸಂದರ್ಭದಲ್ಲಿ ವಿಶ್ರಾಂತ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಎ. ಪ್ರಭಾಕರ ಶರ್ಮ ಮಂಗಳೂರು ಅವರನ್ನು ಸನ್ಮಾನಿಸಲಾಯಿತು.

ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಮತ್ತು ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ. ಎಲ್. ಸಾಮಗ ಸ್ವಾಗತಿಸಿದರು. ಆಸ್ಥಾನ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಮೈಸೂರು ಡಾ| ಮಂಜುನಾಥ ಮತ್ತು ಪಂ| ಜಯತೀರ್ಥ ಮೇವುಂಡಿ ಅವರಿಂದ ಪಿಟೀಲು ಮತ್ತು ಸಂಗೀತ ವಿಶೇಷ ಜುಗಲ್ಬಂದಿ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!