Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ: ಸೆರೆವಾಸ ಅನುಭವಿಸಿದ ಹಿರಿಯರಿಗೆ ಗೌರವಾರ್ಪಣೆ

ತುರ್ತು ಪರಿಸ್ಥಿತಿ ಕರಾಳ ದಿನಾಚರಣೆ: ಸೆರೆವಾಸ ಅನುಭವಿಸಿದ ಹಿರಿಯರಿಗೆ ಗೌರವಾರ್ಪಣೆ

ಉಡುಪಿ: ತುರ್ತು ಪರಿಸ್ಥಿತಿಯ ಕರಾಳ ದಿನಾಚರಣೆ ಪ್ರಯುಕ್ತ ಬಿಜೆಪಿ ಉಡುಪಿ ನಗರ ಆಶ್ರಯದಲ್ಲಿ ಅಧ್ಯಕ್ಷ ಮಹೇಶ್ ಠಾಕೂರ್ ನೇತೃತ್ವದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಉಡುಪಿ ನಗರ ವ್ಯಾಪ್ತಿಯ 10 ಮಂದಿ ಹಿರಿಯರನ್ನು ಅವರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು.

ಬೆಳಿಗ್ಗೆ ಶಾಸಕ ಕೆ. ರಘುಪತಿ ಭಟ್ ಅವರು ಪಕ್ಷದ ಹಿರಿಯ ಮುಂದಾಳು ಎಂ. ಸೋಮಶೇಖರ ಭಟ್ ಅವರನ್ನು ಗೌರವಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಳಿಕ ಚಂದ್ರಶೇಖರ್ ಗಟ್ಟಿಗಾರ್, ಕೊಗ್ಗ ಪೂಜಾರಿ, ಮೋಹನ ಉಪಾಧ್ಯ, ಪ್ರಭಾಕರ ಉಪಾಧ್ಯ, ವೈಜಯಂತಿ ವಿ. ಭಟ್, ರೋಹಿದಾಸ್ ಶೆಣೈ, ಮೋಹನದಾಸ್ ಶೆಣೈ, ಗಣಪತಿ ನಾಯಕ್ ಮತ್ತು ರತ್ನಾಕರ ಉಪಾಧ್ಯ ಅವರನ್ನು ಗೌರವಿಸಲಾಯಿತು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸ್ಥಾಯಿಸಮಿತಿ ಅಧ್ಯಕ್ಷ ಗಿರೀಶ್ ಎಂ. ಅಂಚನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಭಾರತಿ ಚಂದ್ರಶೇಖರ್, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಣಿಪಾಲ್ ಮತ್ತು ದಿನೇಶ್ ಅಮೀನ್, ನಗರಸಭೆ ಸದಸ್ಯರಾದ ರಶ್ಮೀ ಸಿ. ಭಟ್ ಮತ್ತು ಮಾನಸ ಸಿ. ಪೈ, ಮಂಜುನಾಥ್ ಹೆಬ್ಬಾರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!