ಹಿರಿಯ ಕಾರ್ಯಕರ್ತರ ಮನೆ ಭೇಟಿ
(ಸುದ್ದಿಕಿರಣ ವರದಿ)
ಉಡುಪಿ: ಜನಾಶೀರ್ವಾದ ಯಾತ್ರೆಯೊಂದಿಗೆ ಉಡುಪಿಗೆ ಆಗಮಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಗುರುವಾರ ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರ ಮನೆಗಳಿಗೆ ಭೇಟಿ ನೀಡಿದರು.
ಮಾಜಿ ಸಚಿವ ಕೀರ್ತಿಶೇಷ ಡಾ. ವಿ. ಎಸ್. ಆಚಾರ್ಯ ಮನೆಗೆ ಭೇಟಿ ನೀಡಿ, ಡಾ. ಆಚಾರ್ಯ ಧರ್ಮಪತ್ನಿ ಶಾಂತಾ ವಿ. ಆಚಾರ್ಯ ಅವರ ಆರೋಗ್ಯ ಕ್ಷೇಮ ವಿಚಾರಿಸಿದರು.
ಶಾಂತಾ ಆಚಾರ್ಯ ಅವರು ಸಚಿವೆ ಕರಂದ್ಲಾಜೆ ಅವರಿಗೆ ಡಾ. ಆಚಾರ್ಯ ಕುರಿತ ಪುಸ್ತಕ ನೀಡಿದರು. ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಮೊದಲಾದವರಿದ್ದರು.
ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಕೇಶವರಾಯ ಪ್ರಭು ಮನೆಗೆ ಭೇಟಿ ನೀಡಿ ಕ್ಷೇಮಾರೋಗ್ಯ ವಿಚಾರಿಸಿದರು.