ಸುದ್ದಿಕಿರಣ ವರದಿ
ಭಾನುವಾರ, ಜುಲೈ 17
ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ
ಕಾರ್ಕಳ: ಇಲ್ಲಿನ ಸುಮೇಧಾ ಫ್ಯಾಶನ್ ಇನ್ ಸ್ಟಿಟ್ಯೂಟ್ ಮುಖ್ಯಸ್ಥೆ ಸಾಧನ ಜಿ. ಆಶ್ರಿತ್ ಅವರಿಗೆ ಬೆಂಗಳೂರಿನ ಹಾಲ್ ಮಾರ್ಕ್ ಗ್ರೂಪ್ಸ್ ಹಾಗೂ ವಿಜಯ ನ್ಯೂಸ್ ನೀಡುವ ಕಿರುತೆರೆಯ ನಟಿಯರಿಗೆ ಸಿದ್ಧಪಡಿಸಿದ ವಸ್ತ್ರ ವಿನ್ಯಾಸಕ್ಕಾಗಿ ರಾಜ್ಯ ಮಟ್ಟದ ಪ್ರತಿಷ್ಠಿತ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಭಾನುವಾರ ಬೆಂಗಳೂರಿನ ವಸಂತ ನಗರದ ಬಾಬೂಜಿ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಯಿತು.
ಕಳೆದ ವರ್ಷ ವಸ್ತ್ರ ವಿನ್ಯಾಸಕ್ಕಾಗಿ ಗೋಲ್ಡನ್ ವುಮೆನ್ ಅಚೀವರ್ಸ್ ಅವಾರ್ಡ್ ಪಡೆದಿದ್ದ ಅವರು, ಕೆಲವಿ ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಫ್ಯಾಶನ್ ಈವೆಂಟ್ ನಲ್ಲಿ ಪ್ರಶಸ್ತಿ ಪಡೆದಿದ್ದರು.