Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಲಸಿಕೆ ಕುರಿತ ಸಂಸದೆ ಹೇಳಿಕೆ ರಾಜಕೀಯಪ್ರೇರಿತ

ಲಸಿಕೆ ಕುರಿತ ಸಂಸದೆ ಹೇಳಿಕೆ ರಾಜಕೀಯಪ್ರೇರಿತ

ಉಡುಪಿ: ಕೋವಿಡ್ ಲಸಿಕೆ ತೆಗೆದುಕೊಳ್ಳಬಾರದೆಂದು ಚರ್ಚುಗಳಲ್ಲಿ ಅಪಪ್ರಚಾರ ಮಾಡಲಾಗುತ್ತದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ, ಬಿಜೆಪಿಯ ಕೋಮು ಪ್ರಚೋದಿತ ರಾಜಕೀಯದ ಗುಪ್ತ ಕಾರ್ಯಸೂಚಿಯ ಭಾಗ ಎಂದು ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಜನಪ್ರತಿನಿಧಿಗಳ ಇಂಥ ಬೇಜವಾಬ್ದಾರಿತನದ ಅಪ್ರಬುದ್ಧ ಹೇಳಿಕೆಗಳು ಸಾಮಾಜಿಕ ನೆಮ್ಮದಿ ಕೆಡಿಸುತ್ತವೆ. ಸಂಸದೆ ಹೇಳಿಕೆ ಖಂಡನೀಯ ಎಂದರು.

ಕೊರೊನಾ ಒಂದನೇ ಅಲೆಯ ವಿಕೃತಿಯ ಹೊಣೆಯನ್ನು ತಬ್ಲಿಗಿಗಳ ಮೇಲೆ ಹೊರಿಸುವ ಹುನ್ನಾರ ಮಾಡಿ, ಇದೀಗ ಕೊರೋನಾ ಎರಡನೇ ಅಲೆ ನಿರ್ವಹಣೆಯಲ್ಲಿ ತನ್ನ ವೈಫಲ್ಯವನ್ನು ಕ್ರೈಸ್ತ ಸಮುದಾಯದ ಮೇಲೆ ಹೊರಿಸಿ ರಾಜ್ಯದಲ್ಲಿ ಕೋಮು ಕಿಡಿ ಹೊತ್ತಿಸಿ ತನ್ನ ರಾಜಕೀಯದ ಬೇಳೆ ಬೇಯಿಸುವ ಹುನ್ನಾರ ನಡೆಸುತ್ತಿದೆ ಎಂದವರು ಆರೋಪಿಸಿದ್ದಾರೆ.

ಶೋಭಾ ಕರಂದ್ಲಾಜೆ ಸಮಸ್ತ ಕ್ರೈಸ್ತ ಜನಾಂಗದ ಕ್ಷಮೆ ಯಾಚಿಸಬೇಕು ಎಂದೂ ಅಶೋಕ್ ಕುಮಾರ್ ಕೊಡವೂರು ಆಗ್ರಹಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!