Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಕೊರೊನಾ ಹಿನ್ನೆಲೆ: ಅಲೆವೂರು ಗ್ರಾ. ಪಂ.ನಿಂದ ಶೇ. 10 ತೆರಿಗೆ ಕಡಿತ

ಕೊರೊನಾ ಹಿನ್ನೆಲೆ: ಅಲೆವೂರು ಗ್ರಾ. ಪಂ.ನಿಂದ ಶೇ. 10 ತೆರಿಗೆ ಕಡಿತ

ಉಡುಪಿ: ಕೊರೊನಾ ಹಾಗೂ ಲಾಕ್ ಡೌನ್ ಗಳಿಂದ  ಜನತೆ ತೊಂದರೆಗೊಳಗಾಗಿರುವುದನ್ನು ಮನಗಂಡು ಅಲೆವೂರು ಗ್ರಾ. ಪಂ. ಶೇ. 10ರಷ್ಟು ತೆರಿಗೆ ಕಡಿತ ಮಾಡಿದೆ.

ಗ್ರಾಮ ಪಂಚಾಯತ್ ನ ಈ ನಿರ್ಧಾರ ರಾಜ್ಯದಲ್ಲಿಯೇ ಪ್ರಥಮದ್ದಾಗಿದ್ದು, ಸರ್ವರ ಪ್ರಶಂಸೆಗೆ ಪಾತ್ರವಾಗಿದೆ.

ಈಚೆಗೆ ನಡೆದ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅಲೆವೂರು ಹಾಗೂ ಕೊರಂಗ್ರಪಾಡಿ ಗ್ರಾಮಗಳ ಜನರಿಗೆ 2021- 22ನೇ ಸಾಲಿನ ಮನೆ ತೆರಿಗೆ, ವಾಣಿಜ್ಯ ಕಟ್ಟಡ ತೆರಿಗೆ ಮತ್ತು ಉದ್ಯಮ ಪರವಾನಿಗೆ ಶುಲ್ಕ ಶೇ. 10ರಷ್ಟು ಕಡಿತಗೊಳಿಸಿ ನಿರ್ಣಯ ಕೈಗೊಳ್ಳಲಾಯಿತು.

ಮನೆ ಹಾಗೂ ಕಟ್ಟಡ ತೆರಿಗೆಯಿಂದ ಗ್ರಾ. ಪಂ.ಗೆ ಅಂದಾಜು 30 ಲಕ್ಷ ರೂ. ಆದಾಯವಿದ್ದು, ಉದ್ಯಮ ಪರವಾನಿಗೆ ಶುಲ್ಕ ಸುಮಾರು 150 ಉದ್ಯಮಿಗಳಿಂದ ಅಂದಾಜು ರೂ. 1 ಲಕ್ಷದಷ್ಟು ಶುಲ್ಕ ಸಂಗ್ರಹವಾಗುತ್ತಿತ್ತು. ಇದೀಗ ಶೇ. 10ರಷ್ಟು ತೆರಿಗೆ ಹಾಗೂ ಶುಲ್ಕ ವಿನಾಯಿತಿ ಪ್ರಕಟಿಸಿರುವುದರಿಂದ ಗ್ರಾ. ಪಂ. ಆದಾಯದಲ್ಲಿ ಅಂದಾಜು 3 ಲಕ್ಷ ರೂ. ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ.

ಕೊರೊನಾ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಯೋಗ ನಷ್ಟ ಹಾಗೂ ವ್ಯಾಪಾರದಲ್ಲಿ ನಷ್ಟ ಅನುಭವಿಸಿರುವುದರಿಂದ ನಮ್ಮೂರಿನ ಜನ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕಾದುದು ಗ್ರಾಮ ಪಂಚಾಯತಿಯ ಕರ್ತವ್ಯ ಎಂದು ನಂಬಿದ್ದೇವೆ. ನಮ್ಮ ಸಣ್ಣ ಪ್ರಯತ್ನವಾಗಿ ತೆರಿಗೆ ಹಾಗೂ ಶುಲ್ಕದ ಮೊತ್ತದಲ್ಲಿ ಶೇ. 10ರಷ್ಟು ಕಡಿತ ಮಾಡಿದ್ದೇವೆ. ಇದು ರಾಜ್ಯದಲ್ಲಿಯೇ ಪ್ರಥಮವಾಗಿದ್ದು, ಇತರ ಗ್ರಾಮ ಪಂಚಾಯತ್ ಗಳೂ ಈ ಮಾದರಿ ಅನುಸರಿಸಿದರೆ ಜನರಿಗೆ ಸಣ್ಣ ಮಟ್ಟಿನ ಪರಿಹಾರ ಸಿಗುಬಹುದು.

ಪುಷ್ಪಾ ಅಂಚನ್, ಅಧ್ಯಕ್ಷೆ, ಗ್ರಾ. ಪಂ. ಅಲೆವೂರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!