Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಉಡುಪಿಗೆ ಇ.ಎಸ್.ಐ ಆಸ್ಪತ್ರೆ ಮಂಜೂರು

ಉಡುಪಿಗೆ ಇ.ಎಸ್.ಐ ಆಸ್ಪತ್ರೆ ಮಂಜೂರು

ಸುದ್ದಿಕಿರಣ ವರದಿ
ಗುರುವಾರ, ಜುಲೈ 14

ಉಡುಪಿಗೆ ಇಎಸ್.ಐ ಆಸ್ಪತ್ರೆ ಮಂಜೂರು
ಉಡುಪಿ: ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ದೇಶಾದ್ಯಂತ 23 ಇಎಸ್.ಐ ಆಸ್ಪತ್ರೆ ಮಂಜೂರು ಮಾಡಿದ್ದು, ಉಡುಪಿಗೂ 100 ಹಾಸಿಗೆ ಸಾಮರ್ಥ್ಯದ ಇಎಸ್.ಐ ಆಸ್ಪತ್ರೆ ಮಂಜೂರು ಮಾಡಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಆಸ್ಪತ್ರೆ ಮಂಜೂರು ಮಾಡಿದ್ದಾರೆ.

ಇಎಸ್.ಐ. ಆಸ್ಪತ್ರೆ ಸ್ಥಾಪನೆ, ಉಡುಪಿ ಭಾಗದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು, ಇದೀಗ ಆಸ್ಪತ್ರೆ ಮಂಜೂರು ಮಾಡಿದ ಕೇಂದ್ರ ಸಚಿವ ಯಾದವ್ ಹಾಗೂ ಈ ಬಗ್ಗೆ ಶ್ರಮ ವಹಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಜನತೆಯ ಪರವಾಗಿ ಶಾಸಕ ಕೆ. ರಘುಪತಿ ಭಟ್  ಅಭಿನಂದನೆ ಸಲ್ಲಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!