Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ 101ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ ಆಸರೆ ಟ್ರಸ್ಟ್

101ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ ಆಸರೆ ಟ್ರಸ್ಟ್

ಸುದ್ದಿಕಿರಣ ವರದಿ
ಭಾನುವಾರ, ಫೆಬ್ರವರಿ 13

101ನೇ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದ ಆಸರೆ ಟ್ರಸ್ಟ್
ಉಡುಪಿ: ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸೇವಾ ಪ್ರಕಲ್ಪವಾದ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ವತಿಯಿಂದ ಬಡವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯಡಿ ಗೋಪಾಲಪುರ ವಾರ್ಡಿನ ಗಿರಿಜಾ ಆಚಾರ್ತಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ 101ನೇ ಮನೆಗೆ ಬೆಳಕು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ನಿಕಟಪೂರ್ವ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, 2022ರೊಳಗೆ ಉಡುಪಿ ನಗರದ ಎಲ್ಲಾ ಬಡವರ ಮನೆಗೆ ಉಚಿತ ವಿದ್ಯುತ್ ನೀಡುವ ಮೂಲಕ ಉಡುಪಿಯನ್ನು ಶೇ. 100 ವಿದ್ಯುತ್ ಹೊಂದಿದ ದೇಶದ ಮೊತ್ತಮೊದಲ ನಗರವನ್ನಾಗಿಸುವ ಪ್ರಯತ್ನ ಯಶಸ್ಸಿನತ್ತ ಸಾಗುತ್ತಿದೆ ಎಂದರು.

ವಿದ್ಯುತ್ ಸಂಪರ್ಕವಿಲ್ಲದ ಉಡುಪಿ ನಗರದ ಮನೆಗಳಿದ್ದಲ್ಲಿ ಕೂಡಲೇ ಸಾರ್ವಜನಿಕರು ಸಂಪರ್ಕಿಸಿ ಸಹಕರಿಸುವಂತೆ ವಿನಂತಿಸಿದರು.

ಗೋಪಾಲಪುರ ವಾರ್ಡಿನ ಗಿರಿಜಾ ಆಚಾರ್ತಿ ಮನೆಗೆ ಉಚಿತ ವಿದ್ಯುತ್ ಸಂಪರ್ಕ ನೀಡಿದ ದಾನಿ ಎನ್. ವಿಶ್ವನಾಥ ಕಾಮತ್ ಸ್ವಿಚ್ ಆನ್ ಮಾಡಿ ಉದ್ಘಾಟಿಸಿದರು.

ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ. ವಸಂತ ಭಟ್ ಅಧ್ಯಕ್ಷತೆ ವಹಿಸಿದ್ದರು

ಗಣೇಶೋತ್ಸವ ಸಮಿತಿ ಸದಸ್ಯ ರಾಕೇಶ್ ಜೋಗಿ, ನಗರಸಭಾ ಸದಸ್ಯೆ ಮಂಜುಳ ನಾಯಕ್, ಮಡಿ ಮಲ್ಲಿಕಾರ್ಜುನ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಕೋಟ್ಯಾನ್, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಉಮೇಶ್ ಶೆಟ್ಟಿ, ಚಿನ್ಮಯಮೂರ್ತಿ, ಯಾದವ ನಯಂಪಳ್ಳಿ, ದಿನಕರ್ ನಯಂಪಳ್ಳಿ, ಅಮಿತ್ ಪೂಜಾರಿ, ಉದಯ ನಯಂಪಳ್ಳಿ, ಪ್ರತಾಪ್ ಪೂಜಾರಿ, ನವೀನ ನಾಯಕ್, ಶಾಮರಾಯ ಆಚಾರ್ಯ, ಪ್ರಕಾಶ್ ಆಚಾರ್ಯ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!